ಐಪಿಎಲ್​ನಲ್ಲಿ ಅಧಿಕ ಬಾರಿ ನಾಯಕನನ್ನು ಬದಲಿಸಿದ ತಂಡಗಳಿವು

13 January 2025

Pic credit: Google

ಪೃಥ್ವಿ ಶಂಕರ

ಐಪಿಎಲ್ 2025 ಮಾರ್ಚ್ 21 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತನ್ನ ನೂತನ ನಾಯಕನ ಹೆಸರನ್ನು ಪ್ರಕಟಿಸಿದೆ.

Pic credit: Google

ಪಂಜಾಬ್ ಕಿಂಗ್ಸ್ ನಾಯಕತ್ವದ ಜವಾಬ್ದಾರಿಯನ್ನು ಕಳೆದ ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್​ಗೆ ವಹಿಸಿದೆ.

Pic credit: Google

ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್‌ನ 17 ನೇ ನಾಯಕ. ಪಂಜಾಬ್ ಕಿಂಗ್ಸ್‌ಗೆ ಹೋಲಿಸಿದರೆ ಬೇರೆ ಯಾವುದೇ ತಂಡವು ಇಷ್ಟೊಂದು ನಾಯಕರನ್ನು ಬದಲಾಯಿಸಿಲ್ಲ.

Pic credit: Google

ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದ್ದು, ಇದುವರೆಗೆ 13 ಬಾರಿ ನಾಯಕರನ್ನು ಬದಲು ಮಾಡಿದೆ. ಈ ಬಾರಿಯೂ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ.

Pic credit: Google

ನಾಯಕನನ್ನು ಬದಲಾಯಿಸುವ ವಿಚಾರದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೂಡ ಯಾರಿಗೂ ಕಡಿಮೆ ಇಲ್ಲ. ಇದುವರೆಗೆ 10 ಬಾರಿ ಕ್ಯಾಪ್ಟನ್ ಬದಲಾಗಿದ್ದಾರೆ.

Pic credit: Google

ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಹೆಸರೂ ಸೇರಿದ್ದು, ಇದುವರೆಗೆ 9 ನಾಯಕರನ್ನು ಬದಲಾಯಿಸಿದೆ.

Pic credit: Google

ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ 7 ಬಾರಿ ನಾಯಕನನ್ನು ಬದಲಾಯಿಸಿದೆ. ಈ ಬಾರಿಯೂ ಹೊಸ ನಾಯಕನ ಹೆಸರನ್ನು ಘೋಷಿಸಬೇಕಾಗಿದೆ.

Pic credit: Google