ಟೀಂ ಇಂಡಿಯಾದ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
Pic credit: Google
ಇದೀಗ ಏಕೈಕ ಅಂತರರಾಷ್ಟ್ರೀಯ ಪಂದ್ಯವನ್ನಾಡಿರುವ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಮಿಲಿಯನೇರ್ ಆಗುವುದು ಖಚಿತವಾಗಿದೆ.
Pic credit: Google
ವಾಸ್ತವವಾಗಿ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ.
Pic credit: Google
ಹೀಗಾಗಿ ಲಕ್ನೋ ಫ್ರಾಂಚೈಸಿ ಮಯಾಂಕ್ ಯಾದವ್ ಅವರನ್ನು ತಂಡದಲ್ಲಿ ಉಳಿಸಿಕೊಂಡರೆ, ಅವರಿಗೆ ಕನಿಷ್ಠ 11 ಕೋಟಿ ರೂ.ಗಳನ್ನು ನೀಡಬೇಕು.
Pic credit: Google
ಐಪಿಎಲ್ ಧಾರಣ ನಿಯಮಗಳ ಪ್ರಕಾರ, ಯಾವುದೇ ಅನ್‌ಕ್ಯಾಪ್ಡ್ ಆಟಗಾರನು ಹರಾಜಿನ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೆ, ಅವರನ್ನು ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
Pic credit: Google
ಅಲ್ಲದೆ ಐಪಿಎಲ್ ಧಾರಣ ನಿಯಮದ ಪ್ರಕಾರ, ಕ್ರಮವಾಗಿ ಮೂವರ ಆಟಗಾರರಿಗೆ 18 ಕೋಟಿ ರೂ. 14 ಕೋಟಿ ರೂ. ಮತ್ತು 11 ಕೋಟಿ ರೂ. ನೀಡಬೇಕಾಗುತ್ತದೆ.
Pic credit: Google
ಹೀಗಾಗಿ ತಮ್ಮ ವೇಗದ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿರುವ ಮಯಾಂಕ್ರನ್ನು ಲಕ್ನೋ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತವಾಗಿದೆ.
Pic credit: Google
ಒಂದು ವೇಳೆ ಮಯಾಂಕ್ ಯಾದವ್ ಅವರನ್ನು ಲಕ್ನೋ ಬಿಡುಗಡೆ ಮಾಡಿದರೆ, ಇತರ ತಂಡಗಳು ಮಯಾಂಕ್ ಮೇಲೆ ಹಣದ ಮಳೆಯನ್ನೇ ಹರಿಸುವ ಸಾಧ್ಯತೆಗಳಿವೆ.