ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 400ಕ್ಕೂ ಅಧಿಕ ರನ್ ದಾಖಲಿಸಿದ ತಂಡಗಳ ಪಟ್ಟಿ ಇಲ್ಲಿದೆ.

13 November 2023

ಏಕದಿನದಲ್ಲಿ ದಕ್ಷಿಣ ಆಫ್ರಿಕಾ ತಂಡ ಗರಿಷ್ಠ 8 ಬಾರಿ 400ಕ್ಕೂ ಅಧಿಕ ರನ್ ದಾಖಲಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಆಫ್ರಿಕಾ ನಂತರ ಎರಡನೇ ಸ್ಥಾನದಲ್ಲಿರುವ ಭಾರತ ಏಕದಿನದಲ್ಲಿ 7 ಬಾರಿ 400+ ರನ್ ಕಲೆಹಾಕಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಏಕದಿನದಲ್ಲಿ 5 ಬಾರಿ 400ಕ್ಕೂ ಅಧಿಕ ರನ್ ದಾಖಲಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎರಡು ಬಾರಿ ಮಾತ್ರ ಏಕದಿನದಲ್ಲಿ 400ಕ್ಕೂ ಹೆಚ್ಚು ರನ್ ದಾಖಲಿಸಿದ ಸಾಧನೆ ಮಾಡಿದೆ.

ನ್ಯೂಜಿಲೆಂಡ್ ತಂಡವೂ ಏಕದಿನದಲ್ಲಿ ಎರಡು ಬಾರಿ 400ಕ್ಕೂ ರನ್ ದಾಖಲಸಿದೆ.

ಶ್ರೀಲಂಕಾ ಕೂಡ ಏಕದಿನ ಮಾದರಿಯಲ್ಲಿ ಎರಡು ಬಾರಿ 400+ ರನ್ ಕಲೆಹಾಕಿದೆ.

ಜಿಂಬಾಬ್ವೆ ತಂಡ ಒಮ್ಮೆ ಮಾತ್ರ ಏಕದಿನದಲ್ಲಿ 400ಕ್ಕೂ ಹೆಚ್ಚು ರನ್ ಸಿಡಿಸಿದೆ.

ಪಾಕಿಸ್ತಾನ ತಂಡಕ್ಕೆ ಏಕದಿನದಲ್ಲಿ ಒಮ್ಮೆಯೂ 400+ ರನ್ ದಾಖಲಿಸಲು ಸಾಧ್ಯವಾಗಿಲ್ಲ.

2023 ರ ವಿಶ್ವಕಪ್‌ನ ಭಾಗವಾಗಿದ್ದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್‌ಲ್ಯಾಂಡ್ಸ್ ತಂಡಗಳಿಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

NEXT: ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ನಾಯಕ ಯಾರು ಗೊತ್ತಾ?