ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನದಲ್ಲಿ ಕೇವಲ ಬೌಂಡರಿಗಳಿಂದಲೇ ಅಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

11 November 2023

ಸೌರವ್ ಗಂಗೂಲಿ 1999 ರಲ್ಲಿ ಒಟ್ಟು 1767 ರನ್ ಸಿಡಿಸಿದ್ದರು. ಇದರಲ್ಲಿ ಗಂಗೂಲಿ ಬೌಂಡರಿಗಳಿಂದಲೇ 888 ರನ್ ಸಂಗ್ರಹಿಸಿದ್ದರು.

ಮ್ಯಾಥ್ಯೂ ಹೇಡನ್ 2007ರಲ್ಲಿ ಏಕದಿನದಲ್ಲಿ ಒಟ್ಟು 1601 ರನ್ ಗಳಿಸಿದ್ದರು. ಈ ಪೈಕಿ ಅವರು ಬೌಂಡರಿಗಳ ಮೂಲಕ 882 ರನ್ ಕಲೆಹಾಕಿದ್ದರು.

2023 ರಲ್ಲಿ ಶುಭ್​ಮನ್ ಗಿಲ್ ಇಲ್ಲಿಯವರೆಗೆ 1449 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಬೌಂಡರಿಗಳಿಂದ 880 ರನ್ ಕಲೆಹಾಕಿದ್ದಾರೆ.

2007 ರಲ್ಲಿ 1425 ರನ್ ಬಾರಿಸಿದ್ದ ಸಚಿನ್ ತೆಂಡೂಲ್ಕರ್, ಬೌಂಡರಿ ಮತ್ತು ಸಿಕ್ಸರ್‌ಗಳಿಂದ 840 ರನ್ ಸಂಗ್ರಹಿಸಿದ್ದರು.

2000 ರಲ್ಲಿ 1579 ರನ್ ಸಿಡಿಸಿದ್ದ ಸೌರವ್ ಗಂಗೂಲಿ, ಬೌಂಡರಿ ಮತ್ತು ಸಿಕ್ಸರ್‌ಗಳ ಸಹಾಯದಿಂದ 814 ರನ್ ಕಲೆಹಾಕಿದ್ದರು.

2023 ರಲ್ಲಿ ಇಲ್ಲಿಯವರೆಗೆ 1100 ರನ್ ಬಾರಿಸಿರುವ ರೋಹಿತ್ ಶರ್ಮಾ, ಕೇವಲ ಬೌಂಡರಿಗಳಿಂದಲೇ 808 ರನ್ ಗಳಿಸಿದ್ದಾರೆ.

2006 ರಲ್ಲಿ 1217 ರನ್ ಬಾರಿಸಿದ್ದ ಕ್ರಿಸ್ ಗೇಲ್, ಅದರಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಸಹಾಯದಿಂದ 804 ರನ್ ಸಂಗ್ರಹಿಸಿದ್ದರು.

2019 ರಲ್ಲಿ 1490 ರನ್ ಸಿಡಿಸಿದ್ದ ರೋಹಿತ್ ಶರ್ಮಾ, ಇದರಲ್ಲಿ ಬೌಂಡರಿಗಳಿಂದ 800 ರನ್ ಕಲೆಹಾಕಿದ್ದರು.

NEXT: ಐಸಿಸಿಯಿಂದ ಅಮಾನತ್ತಾದ 9 ತಂಡಗಳು ಯಾವುವು ಗೊತ್ತಾ?