ಒಂದೇ ಇನ್ನಿಂಗ್ಸ್‌ನಲ್ಲಿ 8 ಕ್ಯಾಚ್ ಕೈಚೆಲ್ಲಿದ ನ್ಯೂಜಿಲೆಂಡ್
30 November 2024
Pic credit: Google
ಪೃಥ್ವಿ ಶಂಕರ
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇದರ ಮೊದಲ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ಭೀತಿ ಎದುರಾಗಿದೆ.
Pic credit: Google
ಸೋಲಿನ ಅಂಚಿನಲ್ಲಿರುವ ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್‌ಗಳ ಮುನ್ನಡೆ ಸಾಧಿಸಿದ್ದು 6 ವಿಕೆಟ್ ಕಳೆದುಕೊಂಡಿದೆ. ಡ್ಯಾರಿಲ್ ಮಿಚೆಲ್ ಮಾತ್ರ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ನಲ್ಲಿದ್ದಾರೆ.
Pic credit: Google
ತಂಡದ ಈ ಹೀನಾಯ ಸ್ಥಿತಿಗೆ ಅದರ ಕಳಪೆ ಫೀಲ್ಡಿಂಗ್ಗೆ ಪ್ರಮುಖ ಕಾರಣವಾಗಿದ್ದು, ಒಂದೇ ಇನ್ನಿಂಗ್ಸ್‌ನಲ್ಲಿ 8 ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ.
Pic credit: Google
ನ್ಯೂಜಿಲೆಂಡ್ ತಂಡ ಕೈಚೆಲ್ಲಿದ 8 ಕ್ಯಾಚ್ಗಳಲ್ಲಿ ಹ್ಯಾರಿ ಬ್ರೂಕ್ ಅವರದ್ದೇ 5 ಕ್ಯಾಚ್ಗಳಿವೆ. ಇದರ ಲಾಭ ಪಡೆದ ಬ್ರೂಕ್ ಬರೋಬ್ಬರಿ 171 ರನ್ ಕಲೆಹಾಕಿದರು.
Pic credit: Google
ಬ್ರೂಕ್ ಅವರ ಇನ್ನಿಂಗ್ಸ್ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 499 ರನ್ ಗಳಿಸಿ, 153 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.
Pic credit: Google
ನ್ಯೂಜಿಲೆಂಡ್ ತಂಡ ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಕೈಚೆಲ್ಲಿದ ತಂಡಗಳ ಪೈಕಿ ಎರಡನೇ ಸ್ಥಾನದಲ್ಲಿದ್ದು, ಇದುವರೆಗೆ 109 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರೆ, 35 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.
Pic credit: Google
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸೋತರೆ ಡಬ್ಲ್ಯುಟಿಸಿ ಫೈನಲ್‌ನ ರೇಸ್‌ನಿಂದ ಹೊರಗುಳಿಯುವ ಅಪಾಯವಿದೆ. ಏಕೆಂದರೆ ನೇರವಾಗಿ ಫೈನಲ್‌ಗೆ ಹೋಗಲು ಕಿವೀಸ್ ಪಡೆ ಈ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿತ್ತು.
Pic credit: Google
ನ್ಯೂಜಿಲೆಂಡ್ ತಂಡವು ಪ್ರಸ್ತುತ WTC ಪಾಯಿಂಟ್ ಪಟ್ಟಿಯಲ್ಲಿ 54.55 ಶೇಕಡಾ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಭಾರತ ತಂಡ ಮೊದಲ ಸ್ಥಾನದಲ್ಲಿದೆ.