ನಿತೀಶ್ ರೆಡ್ಡಿಗೆ ಟೀಂ ಇಂಡಿಯಾದಲ್ಲಿ ಸಿಗುವ ಸಂಬಳ ಎಷ್ಟು ಗೊತ್ತಾ?
28 December 2024
Pic credit: Google
ಪೃಥ್ವಿ ಶಂಕರ
ಆಸ್ಟ್ರೇಲಿಯಾ ವಿರುದ್ಧದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಅಜೇಯ ಶತಕ ಬಾರಿಸುವ ಮೂಲಕ ನಿತೀಶ್ ಕುಮಾರ್ ರೆಡ್ಡಿ ಇತಿಹಾಸ ಸೃಷ್ಟಿಸಿದ್ದಾರೆ.
Pic credit: Google
ಇದರೊಂದಿಗೆ ನಿತೀಶ್ ಕುಮಾರ್ ರೆಡ್ಡಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಭಾರತೀಯ ಎಂಬ ದಾಖಲೆಯನ್ನೂ ಸೃಷ್ಟಿಸಿದ್ದಾರೆ.
Pic credit: Google
ಈ ನಡುವೆ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿ ದಾಖಲೆಯ ಶತಕ ಸಿಡಿಸಿದ ನಿತೀಶ್ಗೆ ಟೀಂ ಇಂಡಿಯಾದಿಂದ ಎಷ್ಟು ವೇತನ ಸಿಗುತ್ತದೆ ಎಂಬುದು ಎಲ್ಲರ ಕುತೂಹಲವಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.
Pic credit: Google
ವಾಸ್ತವವಾಗಿ ನಿತೀಶ್ ಕುಮಾರ್ ರೆಡ್ಡಿ ಪ್ರಸ್ತುತ ಬಿಸಿಸಿಐ ಒಪ್ಪಂದದಲ್ಲಿಲ್ಲ. ಹೀಗಾಗಿ ಅವರು ಪ್ರತಿ ಪಂದ್ಯಕ್ಕೂ ಪಂದ್ಯ ಶುಲ್ಕವಾಗಿ ಸಂಭಾವನೆ ಪಡೆಯುತ್ತಾರೆ.
Pic credit: Google
ಟೀಂ ಇಂಡಿಯಾ ಪರ ಇದುವರೆಗೆ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ನಿತೀಶ್ ಪ್ರತಿ ಟೆಸ್ಟ್ ಪಂದ್ಯಕ್ಕೆ ಪಂದ್ಯ ಶುಲ್ಕವಾಗಿ 15 ಲಕ್ಷ ರೂ. ಪಡೆಯಲಿದ್ದಾರೆ.
Pic credit: Google
ಅಂದರೆ ಇದುವರೆಗೆ 4 ಟೆಸ್ಟ್ ಆಡಿರುವ ನಿತೀಶ್ಗೆ ಇದುವರೆಗೆ 60 ಲಕ್ಷ ರೂ. ವೇತನ ಬಿಸಿಸಿಐನಿಂದ ಸಿಕ್ಕಿದೆ.
Pic credit: Google
ಇದಲ್ಲದೆ ನಿತೀಶ್ ಟೀಂ ಇಂಡಿಯಾ ಪರ 3 ಟಿ20 ಪಂದ್ಯಗಳನ್ನು ಆಡಿದ್ದು, ಬಿಸಿಸಿಐನಿಂದ ಪ್ರತಿ ಪಂದ್ಯಕ್ಕೆ 3 ಲಕ್ಷ ರೂ. ಅಂದರೆ ಇಲ್ಲಿಯವರೆಗೆ 9 ಲಕ್ಷ ರೂ. ವೇತನ ಪಡೆದಿದ್ದಾರೆ.
Pic credit: Google
ತಂಡದ ಪರ ಇದುವರೆಗೆ 4 ಪಂದ್ಯಗಳನ್ನಾಡಿರುವ ನಿತೀಶ್ ಬಿಸಿಸಿಐನ ಸಿ ಗ್ರೇಡ್ ಗುತ್ತಿಗೆ ಪಡೆಯುವುದು ಖಚಿತವಾಗಿದೆ. ನಿಯಮಗಳ ಪ್ರಕಾರ, ಅವರು ಈಗ ವಾರ್ಷಿಕವಾಗಿ ಕನಿಷ್ಠ 1 ಕೋಟಿ ರೂ. ವೇತನ ಪಡೆಯಲಿದ್ದಾರೆ.