ಏಕದಿನ ಸರಣಿಯಿಂದ ಹೆಡ್- ಮಾರ್ಷ್​ ಔಟ್

14 october 2024

Pic credit: Google

ಪೃಥ್ವಿ ಶಂಕರ

Pic credit: Google

ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತನ್ನ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.

Pic credit: Google

ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರಾದ ಮಿಚೆಲ್ ಮಾರ್ಷ್​ ಹಾಗೂ ಟ್ರಾವಿಸ್ ಹೆಡ್ ಹಿಂದೆ ಸರಿದಿದ್ದಾರೆ.

Pic credit: Google

ವಾಸ್ತವವಾಗಿ ಈ ಆಟಗಾರರು ಸರಣಿಯಿಂದ ಹೊರಬೀಳಲು ಕಾರಣವಿದ್ದು, ತಂದೆಯಾಗುವ ಸಂತಸದಲ್ಲಿರುವ ಮಿಚೆಲ್ ಮಾರ್ಷ್ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ.

Pic credit: Google

ಇತ್ತ ಟ್ರಾವಿಸ್ ಹೆಡ್ ಕೂಡ ತಂದೆಯಾಗಲಿದ್ದು, ಹೀಗಾಗಿ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ.

Pic credit: Google

ಹೀಗಾಗಿ ಈ ಇಬ್ಬರ ಬದಲಿಗೆ  ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಮ್ಯಾಥ್ಯೂ ಶಾರ್ಟ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

Pic credit: Google

ನವೆಂಬರ್ 4 ರಿಂದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಏಕದಿನ ಸರಣಿ ಆರಂಭವಾಗಲಿದೆ. ಎರಡನೇ ಪಂದ್ಯ ನವೆಂಬರ್ 8 ರಂದು ಮತ್ತು ಮೂರನೇ ಪಂದ್ಯ ನವೆಂಬರ್ 10 ರಂದು ನಡೆಯಲಿದೆ.

Pic credit: Google

ಉಭಯ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನವೆಂಬರ್ 14 ರಂದು, ಎರಡನೇ ಪಂದ್ಯ ನವೆಂಬರ್ 16 ರಂದು ಮತ್ತು ಮೂರನೇ ಪಂದ್ಯ ನವೆಂಬರ್ 18 ರಂದು ನಡೆಯಲಿದೆ.