ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮುಲ್ತಾನ್‌ನಲ್ಲಿ ನಡೆಯುತ್ತಿದೆ.
Pic credit: Google
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 556 ರನ್ ಗಳಿಸಿತ್ತು. ಉತ್ತರವಾಗಿ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಆರಂಭಿಸಿದೆ.
Pic credit: Google
ಜೋ ರೂಟ್ ಇಂಗ್ಲೆಂಡ್ ಪರ ತಮ್ಮ ಟೆಸ್ಟ್ ವೃತ್ತಿಜೀವನದ 35ನೇ ಶತಕ ದಾಖಲಿಸಿದ್ದು, ಈ ಶತಕದೊಂದಿಗೆ ಹಲವು ದಾಖಲೆ ನಿರ್ಮಿಸಿದ್ದಾರೆ.
Pic credit: Google
ಅದರಲ್ಲಿ ಪ್ರಮುಖವಾಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್ ಮಾಡಿದ ವಿಷಯದಲ್ಲಿ ಅವರು ರಾಹುಲ್ ದ್ರಾವಿಡ್ ಅವರನ್ನು ಸರಿಗಟ್ಟಿದ್ದಾರೆ.
Pic credit: Google
ರೂಟ್ ಮತ್ತು ದ್ರಾವಿಡ್ ಇಬ್ಬರೂ ಟೆಸ್ಟ್‌ನಲ್ಲಿ ತಲಾ 99 ಬಾರಿ 50+ ಸ್ಕೋರ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ರೂಟ್ 35 ಶತಕ ಮತ್ತು 64 ಅರ್ಧ ಶತಕಗಳನ್ನು ಗಳಿಸಿದರೆ, ದ್ರಾವಿಡ್ 36 ಶತಕ ಮತ್ತು 63 ಅರ್ಧ ಶತಕಗಳನ್ನು ಸಿಡಿಸಿದ್ದರು.
Pic credit: Google
ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 119 ಬಾರಿ ಈ ಸಾಧನೆ ಮಾಡಿದ್ದು, ಅವರು ಟೆಸ್ಟ್‌ನಲ್ಲಿ 51 ಶತಕ ಮತ್ತು 68 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
Pic credit: Google
ಉಳಿದಂತೆ ಜಾಕ್ವೆಸ್ ಕಾಲಿಸ್ ಮತ್ತು ರಿಕಿ ಪಾಂಟಿಂಗ್ ತಲಾ 103 50+ ಇನ್ನಿಂಗ್ಸ್ಗಳೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.