52 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ ಪಾಕ್ ಸ್ಪಿನ್ ಜೋಡಿ

18 october 2024

Pic credit: Google

ಪೃಥ್ವಿ ಶಂಕರ

Pic credit: Google

ಮುಲ್ತಾನ್ ಟೆಸ್ಟ್​ನಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 152 ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಸುಮಾರು 3.5 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿದೆ. ಪಾಕಿಸ್ತಾನದ ಈ ಗೆಲುವಿನಲ್ಲಿ ತಂಡದ ಇಬ್ಬರು ಸ್ಪಿನ್ ಬೌಲರ್‌ಗಳ ಪಾತ್ರ ಅಪಾರವಾಗಿತ್ತು.

Pic credit: Google

ಈ ಸ್ಪಿನ್ ಜೋಡಿ ಇಂಗ್ಲೆಂಡ್‌ನ ಎಲ್ಲಾ 20 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಎಡಗೈ ಸ್ಪಿನ್ನರ್ ನೋಮನ್ ಅಲಿ 11 ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ಸಾಜಿದ್ ಖಾನ್ 9 ವಿಕೆಟ್ ಪಡೆದರು.

Pic credit: Google

ನೋಮನ್ ಅಲಿ ಮತ್ತು ಸಾಜಿದ್ ಖಾನ್ ತಲಾ 20 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದು, 52 ವರ್ಷಗಳ ನಂತರ, ತಂಡದ ಇಬ್ಬರು ಬೌಲರ್‌ಗಳು ಎಲ್ಲಾ 20 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಬರೆದಿದ್ದಾರೆ.

Pic credit: Google

ಇದಕ್ಕೂ ಮುನ್ನ 1972ರಲ್ಲಿ ಇಂಗ್ಲೆಂಡ್‌ನ ಡೆನ್ನಿಸ್ ಲಿಲ್ಲಿ ಮತ್ತು ಬಾಬ್ ಮಾಸ್ಸೆ ಈ ಸಾಧನೆ ಮಾಡಿದ್ದರು. ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7 ನೇ ಬಾರಿಗೆ ಇಬ್ಬರು ಬೌಲರ್‌ಗಳು ಎಲ್ಲಾ 20 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Pic credit: Google

ಒಂದೇ ಪಂದ್ಯದಲ್ಲಿ 20 ವಿಕೆಟ್ ಪಡೆದ ಸಾಧನೆ ಮಾಡಿದ ಪಾಕಿಸ್ತಾನದ ಎರಡನೇ ಜೋಡಿ ನೋಮನ್ ಅಲಿ ಮತ್ತು ಸಾಜಿದ್ ಖಾನ್.

Pic credit: Google

68 ವರ್ಷಗಳ ಬಳಿಕ ಪಾಕಿಸ್ತಾನದ ಜೋಡಿ ಒಂದೇ ಪಂದ್ಯದಲ್ಲಿ 20 ವಿಕೆಟ್ ಪಡೆದ ಸಾಧನೆ ಮಾಡಿದೆ. ಇದಕ್ಕೂ ಮೊದಲು 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫಜಲ್ ಮಹಮೂದ್ ಮತ್ತು ಖಾನ್ ಮೊಹಮ್ಮದ್ ತಲಾ 20 ವಿಕೆಟ್ ಪಡೆದಿದ್ದರು.

Pic credit: Google

ಇದರೊಂದಿಗೆ 1987 ರ ನಂತರ ಅಂದರೆ 37 ವರ್ಷಗಳ ನಂತರ ಇಬ್ಬರು ಪಾಕಿಸ್ತಾನಿ ಸ್ಪಿನ್ನರ್‌ಗಳು ಒಂದೇ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು.