ಟೀಂ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
Pic credit: Google
ಕೊಹ್ಲಿ ತಾವು ಮಾತ್ರವಲ್ಲದೆ ಅವರ ಮಡದಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳನ್ನು ಸಹ ಆಶ್ರಮಕ್ಕೆ ಕರೆದುಕೊಂಡು ಬಂದಿದ್ದಾರೆ.
Pic credit: Google
ಈ ವೇಳೆ ಕೊಹ್ಲಿಯ ವೈಫಲ್ಯದ ಬಗ್ಗೆ ಮಾತನಾಡಿರುವ ಪ್ರೇಮಾನಂದ ಮಹಾರಾಜ್,ಕೆಲವೊಮ್ಮೆ ನಾವು ಚೆನ್ನಾಗಿ ಅಭ್ಯಾಸ ಮಾಡುತ್ತೇವೆ ಆದರೆ ವಿಧಿ ಲಿಖಿತ ಏನಿರುತ್ತದೋ ಅದು ಮಾತ್ರ ಜರುಗುತ್ತದೆ.
Pic credit: Google
ಅದೃಷ್ಟ ಮತ್ತು ಅಭ್ಯಾಸ ಒಟ್ಟಿಗೆ ಸೇರಿದಾಗ ಮಾತ್ರ ನೀವು ಯಶಸ್ವಿಯಾಗುತ್ತೀರಿ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.
Pic credit: Google
ಇನ್ನು ಕೊಹ್ಲಿಯ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ವಿರಾಟ್ ತಮ್ಮ ಆಟದ ಮೂಲಕ ಇಡೀ ಭಾರತಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
Pic credit: Google
ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವುದನ್ನು ಮುಂದುವರಿಸಬೇಕು. ಕ್ರಿಕೆಟ್ನಲ್ಲಿ ವೈಫಲ್ಯ ಎಂಬುದು ಯಾವಾಗಲೂ ಇರುವುದಿಲ್ಲ. ಹಾಗೆಯೇ ಯಶಸ್ಸು ಯಾವಾಗಲೂ ಇರುವುದಿಲ್ಲ. ಹಗಲು ರಾತ್ರಿಗಳಂತೆ ಅದು ಕೂಡ ಬದಲಾಗುತ್ತಿರುತ್ತದೆ ಎಂದಿದ್ದಾರೆ.
Pic credit: Google
ಇಷ್ಟೆಲ್ಲಾ ಸಾಧನೆ ಮಾಡಿದ ನಂತರವೂ ವಿರಾಟ್ ಮತ್ತು ಅನುಷ್ಕಾ ಭಕ್ತಿಯತ್ತ ಮುಖ ಮಾಡುತ್ತಿರುವುದೇ ದೊಡ್ಡ ವಿಷಯ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.