ನ್ಯೂಜಿಲೆಂಡ್ ಬ್ಯಾಟರ್​ಗಳಾದ  ಡ್ಯಾರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಏಕದಿನ ವಿಶ್ವಕಪ್​ನಲ್ಲಿ 44 ವರ್ಷಗಳ ಹಳೆದ ದಾಖಲೆ ಮುರಿದಿದ್ದಾರೆ.

22 October 2023

ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್‌ 273 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಪಂದ್ಯದಲ್ಲಿ ಡ್ಯಾರಿಲ್ ಮಿಚೆಲ್ ಶತಕ ಬಾರಿಸುವಲ್ಲಿ ಯಶಸ್ವಿಯಾದರೆ, ರಚಿನ್ 75 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಮಿಚೆಲ್ 130 ರನ್ ಗಳಿಸಿ ಔಟಾದರು.

ಇಬ್ಬರೂ ಮೂರನೇ ವಿಕೆಟ್‌ಗೆ 159 ರನ್‌ಗಳ ಜೊತೆಯಾಟವನ್ನಾಡುವುದರೊಂದಿಗೆ ಕೆಲವು ದಾಖಲೆಗಳನ್ನು ಮುರಿದರು.

ಈ ಜೊತೆಯಾಟದೊಂದಿಗೆ ಮಿಚೆಲ್-ರಚಿನ್ 44 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್‌ಗೆ ಇದು ಎರಡನೇ ಶತಕದ ಜೊತೆಯಾಟವಾಗಿದೆ.

ಇದಕ್ಕೂ ಮೊದಲು 1979ರಲ್ಲಿ ಜಾನ್ ರೈಟ್ ಮತ್ತು ಬ್ರೂಸ್ ಎಡ್ಗರ್ 100 ರನ್ ಜೊತೆಯಾಟವಾಡಿದ್ದರು.

34ನೇ ಓವರ್‌ನಲ್ಲಿ ರಚಿನ್ ಔಟಾದರೆ, 127 ಎಸೆತಗಳನ್ನು ಎದುರಿಸಿ, ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ 130 ರನ್ ಸಿಡಿಸಿದರು.

ಇದು ಏಕದಿನದಲ್ಲಿ ಮಿಚೆಲ್ ಅವರ ಐದನೇ ಶತಕವಾಗಿದ್ದರೆ, ಈ ವರ್ಷ ಏಕದಿನದಲ್ಲಿ ಸಿಡಿದ ಐದನೇ ಶತಕವಾಗಿದೆ.