ದ್ರಾವಿಡ್ ನಿರ್ಮಿಸಿರುವ ಈ 5 ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ

11 January 2025

Pic credit: Google

ಪೃಥ್ವಿ ಶಂಕರ

ಭಾರತ ತಂಡದ ಮಾಜಿ ನಾಯಕ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಶನಿವಾರ (ಜನವರಿ 11) 52 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

Pic credit: Google

ಟೀಮ್ ಇಂಡಿಯಾದ ಕೋಚ್ ಹುದ್ದೆಯನ್ನು ತೊರೆದ ನಂತರ, ದ್ರಾವಿಡ್ ಇತ್ತೀಚಿನ ದಿನಗಳಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ.

Pic credit: Google

ದ್ರಾವಿಡ್ ತಮ್ಮ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಹಲವು ದಾಖಲೆ ಸೃಷ್ಟಿಸಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ರಾವಿಡ್ ನಿರ್ಮಿಸಿದ ಈ ಐದು ದಾಖಲೆಗಳನ್ನು ಮುರಿಯುವುದು ಕಷ್ಟ.

Pic credit: Google

ದ್ರಾವಿಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 31,258 ಎಸೆತಗಳನ್ನು ಎದುರಿಸಿದ್ದಾರೆ. ಅಂದರೆ ಸರಿಸುಮಾರು 5210 ಓವರ್‌ಗಳು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಆಟಗಾರ ಎನಿಸಿಕೊಂಡಿರುವ ದ್ರಾವಿಡ್ ಅವರ ಈ ದಾಖಲೆಯನ್ನು ಮುರಿಯುವುದು ತುಂಬಾ ಕಷ್ಟ.

Pic credit: Google

ಟೆಸ್ಟ್ ಕ್ರಿಕೆಟ್‌ನಲ್ಲಿ 210 ಕ್ಯಾಚ್​ಗಳನ್ನು ಹಿಡಿದಿರುವ ರಾಹುಲ್ ದ್ರಾವಿಡ್ ಈ ಮಾದರಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದಿರುವ ಫೀಲ್ಡರ್ ಎನಿಸಿಕೊಂಡಿದ್ದಾರೆ.

Pic credit: Google

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕ್ರೀಸ್‌ನಲ್ಲಿ ಹೆಚ್ಚು ನಿಮಿಷ ಅಂದರೆ ಒಟ್ಟು 44,152 ನಿಮಿಷ ಕಾಲ ಕಳೆದ ಏಕೈಕ ಬ್ಯಾಟರ್ ದ್ರಾವಿಡ್.

Pic credit: Google

ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಧಿಕ ಶತಕಗಳ ಜೊತೆಯಾಟ ಅಂದರೆ 100 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ 88 ಪಾಲುದಾರಿಕೆಗಳನ್ನು ದ್ರಾವಿಡ್ ಮಾಡಿದ್ದಾರೆ.

Pic credit: Google

ಇದಲ್ಲದೆ ಟೆಸ್ಟ್‌ನಲ್ಲಿ 300 ಕ್ಕೂ ಹೆಚ್ಚು ಪಾಲುದಾರಿಕೆಗಳನ್ನು ಅಂದರೆ ಆರು ಬಾರಿ 300 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ದ್ರಾವಿಡ್ ಮಾಡಿದ್ದಾರೆ.

Pic credit: Google