IPL 2025: ಪ್ರತಿ ಪಂದ್ಯಕ್ಕೆ ರಿಷಬ್ ಪಂತ್ ಪಡೆಯುವ ಸಂಭಾವನೆ ಎಷ್ಟು ಕೋಟಿ?
20 January 2025
Pic credit: Google
ಪೃಥ್ವಿ ಶಂಕರ
ರಿಷಬ್ ಪಂತ್ ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸ್ವತಃ ಈ ವಿಚಾರವನ್ನು ತಂಡದ ಮಾಲೀಕ ಸಂಜೀವ್ ಗೋಯಂಕಾ ಬಹಿರಂಗಪಡಿಸಿದ್ದಾರೆ.
Pic credit: Google
ಪಂತ್ ಐಪಿಎಲ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಮುಂದಿನ 10 ವರ್ಷಗಳಲ್ಲಿ ರೋಹಿತ್-ಧೋನಿ ಜೊತೆಗೆ ಅವರ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸಂಜೀವ್ ಗೋಯೆಂಕಾ ಹೇಳಿದ್ದಾರೆ.
Pic credit: Google
ರಿಷಬ್ ಪಂತ್ ಈಗ ಐಪಿಎಲ್‌ನ ಅತ್ಯಂತ ದುಬಾರಿ ನಾಯಕ ಎನಿಸಿಕೊಂಡಿದ್ದು, ಈ ವಿಚಾರದಲ್ಲಿ ಅವರು ಪ್ಯಾಟ್ ಕಮಿನ್ಸ್ ಅವರನ್ನು ಸಹ ಹಿಂದಿಕ್ಕಿದ್ದಾರೆ.
Pic credit: Google
ಈ ಐಪಿಎಲ್ನಲ್ಲಿ ರಿಷಬ್ ಪಂತ್ ಸಂಭಾವನೆ 27 ಕೋಟಿ ಆಗಿದ್ದು, 20.50 ಕೋಟಿ ಸಂಭಾವನೆ ಪಡೆಯುತ್ತಿರುವ ಕಮಿನ್ಸ್ ಅವರನ್ನು ಹಿಂದಿಕ್ಕಿದ್ದಾರೆ.
Pic credit: Google
ಲಕ್ನೋ ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದ್ದು, ರಿಷಬ್ ಪಂತ್ ಪ್ರತಿ ಪಂದ್ಯವನ್ನು ಆಡುವುದಕ್ಕೆ 1.92 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.
Pic credit: Google
ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಕೂಡ. ಇದುವರೆಗೂ ಯಾವುದೇ ಪ್ರಶಸ್ತಿ ಗೆಲ್ಲದ ಲಕ್ನೋವನ್ನು ಚಾಂಪಿಯನ್ ಮಾಡುವ ಜವಾಬ್ದಾರಿ ಈಗ ಅವರ ಮೇಲಿದೆ.
Pic credit: Google
ರಿಷಬ್ ಪಂತ್ ನಾಯಕತ್ವದ ಅನುಭವ ಹೊಂದಿದ್ದು, ಅವರು 2021 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು.