ಮಾಸ್ಟರ್ಸ್ ಲೀಗ್: ಭಾರತ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕ

17 January 2025

Pic credit: Google

ಪೃಥ್ವಿ ಶಂಕರ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರಬಹುದು. ಆದರೆ ಅವರ ಅಭಿಮಾನಿಗಳ ಸಲುವಾಗಿ, ಅವರು ಆಗಾಗ್ಗೆ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

Pic credit: Google

ಈ ಹಿಂದೆ ಲೆಜೆಂಡ್ಸ್ ಲೀಗ್‌ನಂತಹ ಪಂದ್ಯಾವಳಿಗಳಲ್ಲಿ ಆಡಿದ್ದ ಮಾಸ್ಟರ್ ಬ್ಲಾಸ್ಟರ್ ಇದೀಗ ಮತ್ತೊಮ್ಮೆ ಮೈದಾನಕ್ಕೆ ಮರಳುತ್ತಿದ್ದಾರೆ.

Pic credit: Google

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ಈಗ ಇಂಟರ್‌ನ್ಯಾಶನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಆಡಲಿದ್ದಾರೆ.

Pic credit: Google

ಈ ಹೊಸ ಲೀಗ್‌ನಲ್ಲಿ ಸಚಿನ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಈ ಲೀಗ್ ಭಾರತದಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 16 ರವರೆಗೆ ನಡೆಯಲಿದೆ.

Pic credit: Google

ಭಾರತದ ಮತ್ತೊಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರನ್ನು ಈ ಲೀಗ್‌ನ ಆಯುಕ್ತರನ್ನಾಗಿ ನೇಮಿಸಲಾಗಿದೆ.

Pic credit: Google

ಈ ಪಂದ್ಯಾವಳಿಯ ಪಂದ್ಯಗಳು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ, ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂ ಮತ್ತು ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.

Pic credit: Google

ಭಾರತವಲ್ಲದೆ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಕೂಡ ಇದರಲ್ಲಿ ಆಡಲಿದ್ದು, ಇದರಲ್ಲಿ ಬ್ರಿಯಾನ್ ಲಾರಾ, ಜಾಕ್ವೆಸ್ ಕಾಲಿಸ್, ಶೇನ್ ವ್ಯಾಟ್ಸನ್, ಕುಮಾರ ಸಂಗಕ್ಕಾರ ಮುಂತಾದ ದಿಗ್ಗಜರು ಭಾಗವಹಿಸಲಿದ್ದಾರೆ.

Pic credit: Google