ಕಾಂಬ್ಳಿಗಿಂತ ದುಪ್ಪಟ್ಟು ಪಿಂಚಣಿ ಪಡೆಯುವ ಸಚಿನ್ ತೆಂಡೂಲ್ಕರ್

14 December 2024

Pic credit: Google

ಪೃಥ್ವಿ ಶಂಕರ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಆದರೂ ಅವರು ಬಿಸಿಸಿಐನಿಂದ ಪಿಂಚಣಿಯನ್ನೂ ಪಡೆಯುತ್ತಾರೆ.

Pic credit: Google

2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಚಿನ್ ತೆಂಡೂಲ್ಕರ್ 200 ಟೆಸ್ಟ್‌ಗಳನ್ನು ಆಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

Pic credit: Google

ಈಗ ಪ್ರಶ್ನೆಯೆಂದರೆ, ನಿವೃತ್ತಿಯ ನಂತರ ಸಚಿನ್ ತೆಂಡೂಲ್ಕರ್ ಬಿಸಿಸಿಐನಿಂದ ಎಷ್ಟು ಪಿಂಚಣಿ ಪಡೆಯುತ್ತಿದ್ದಾರೆ ಎಂಬುದು.

Pic credit: Google

2022 ರಲ್ಲಿ ನಿವೃತ್ತ ಆಟಗಾರರ ಪಿಂಚಣಿಯನ್ನು ಬಿಸಿಸಿಐ ಹೆಚ್ಚಿಸಿದ ನಂತರ, ಸಚಿನ್ ತೆಂಡೂಲ್ಕರ್ ಪಡೆಯುವ ಪಿಂಚಣಿ ಮೊತ್ತವು 60,000 ರೂ. ಆಗಿದೆ.

Pic credit: Google

ಅರ್ಥಾತ್ ಸಚಿನ್ ತೆಂಡೂಲ್ಕರ್ ಬಿಸಿಸಿಐನಿಂದ ಪಡೆಯುತ್ತಿರುವ ಪಿಂಚಣಿ ಮೊತ್ತವು ವಿನೋದ್ ಕಾಂಬ್ಳಿ ಪಡೆಯುವ ಪಿಂಚಣಿ ಮೊತ್ತಕ್ಕಿಂತ ದುಪ್ಪಟ್ಟಾಗಿದೆ.

Pic credit: Google

ಸಚಿನ್ ತಿಂಗಳಿಗೆ 60000 ರೂ ಪಿಂಚಣಿ ಪಡೆದರೆ, ವಿನೋದ್ ಕಾಂಬ್ಳಿ ಪಿಂಚಣಿಯಾಗಿ ಕೇವಲ 30,000 ರೂಗಳನ್ನು ಪಡೆಯುತ್ತಿದ್ದಾರೆ.

Pic credit: Google