ಕಳೆದ 24 ಗಂಟೆಗಳೊಳಗೆ ಟೀಂ ಇಂಡಿಯಾದ 7 ಆಟಗಾರರು ವಿವಿಧ ಪಂದ್ಯಗಳಲ್ಲಿ 7 ಶತಕ ಸಿಡಿಸಿದ್ದಾರೆ. ಅವರುಗಳ ವಿವರ ಇಲ್ಲಿದೆ.
Pic credit: Google
ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ತಮ್ಮ ಮೊದಲ ಟೆಸ್ಟ್ ಶತಕ ದಾಖಲಿಸಿದರು.
Pic credit: Google
ತಮ್ಮ ಕಳಪೆ ಫಾರ್ಮ್‌ಗೆ ಅಂತ್ಯ ಹಾಡಿರುವ ಶ್ರೇಯಸ್ ಅಯ್ಯರ್ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ಪರ ಅದ್ಭುತ ಶತಕ ಬಾರಿಸಿದರು.
Pic credit: Google
ಇಶಾನ್ ಕಿಶನ್ ಕೂಡ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ. ಜಾರ್ಖಂಡ್ ಪರ ನಾಯಕತ್ವದ ಇನ್ನಿಂಗ್ಸ್ ಆಡಿದ ಅವರು ರೈಲ್ವೇಸ್ ವಿರುದ್ಧ 101 ರನ್ ಗಳಿಸಿದರು.
Pic credit: Google
ವಾಷಿಂಗ್ಟನ್ ಸುಂದರ್ ಅವರು ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ತಮಿಳುನಾಡು ಪರ ಶತಕ ಬಾರಿಸಿದರು, ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಎರಡನೇ ಶತಕವಾಗಿದೆ.
Pic credit: Google
ರಣಜಿ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುತ್ತಿರುವ ಸಾಯಿ ಸುದರ್ಶನ್ ದೆಹಲಿ ವಿರುದ್ಧ ದ್ವಿಶತಕ ಬಾರಿಸಿದ್ದಾರೆ.
Pic credit: Google
ಒರಿಸ್ಸಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ಬ್ಯಾಟರ್ ಅಬ್ದುಲ್ ಸಮದ್ ಶತಕ ಬಾರಿಸಿದರು. ಅವರು 117 ಎಸೆತಗಳಲ್ಲಿ 127 ರನ್‌ಗಳ ಇನಿಂಗ್ಸ್ ಆಡಿದರು.
Pic credit: Google
17 ವರ್ಷದ ಮುಂಬೈ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಮಹಾರಾಷ್ಟ್ರ ವಿರುದ್ಧ ಶತಕ ಸಿಡಿಸಿದ್ದಾರೆ. ಇದು ರಣಜಿ ಟ್ರೋಫಿ ಪಿಚ್‌ನಲ್ಲಿ ಅವರ ಮೊದಲ ಶತಕವಾಗಿದೆ.