ಈ ವಿಚಾರಗಳಲ್ಲಿ ಕಿಂಗ್ ಕೊಹ್ಲಿಗಿಂತ ಶಿಖರ್ ಧವನ್ ಬೆಸ್ಟ್

24 August 2024

Pic credit: Google

ಪೃಥ್ವಿ ಶಂಕರ

Pic credit: Google

ಶಿಖರ್ ಧವನ್ ಅಂತಾ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.  ತಮ್ಮ 14 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಧವನ್  ಅನೇಕ ದಾಖಲೆಗಳನ್ನು ನಿರ್ಮಿಸಿದ್ದು, ಅದರಲ್ಲಿ ಕೆಲವು ಅಪರೂಪದ ದಾಖಲೆಗಳ ವಿವರ ಇಲ್ಲಿದೆ.

Pic credit: Google

ಶಿಖರ್ ಧವನ್ ಐಸಿಸಿ ಟೂರ್ನಿಯಲ್ಲಿ ವೇಗವಾಗಿ 1000 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವರನ್ನು ಮಿಸ್ಟರ್ ಐಸಿಸಿ ಎಂದೂ ಕರೆಯಲಾಗುತ್ತಿತ್ತು.

Pic credit: Google

ಇದಲ್ಲದೆ ಧವನ್ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ನಂಬರ್ 1 ಆಟಗಾರನಾಗಿದ್ದು, ಕೊಹ್ಲಿಗಿಂತ ಮುಂದಿದ್ದಾರೆ.

Pic credit: Google

ಧವನ್ ಐಸಿಸಿ ಟೂರ್ನಿಗಳಲ್ಲಿ 65.35 ಸರಾಸರಿಯಲ್ಲಿ 1238 ರನ್ ಬಾರಿಸಿದ್ದರೆ, ಕೊಹ್ಲಿ 64.55 ಸರಾಸರಿಯಲ್ಲಿ 2324 ರನ್ ಸಿಡಿಸಿದ್ದಾರೆ.

Pic credit: Google

ಹಾಗೆಯೇ ಧವನ್ ಅತಿ ಹೆಚ್ಚು ಗೋಲ್ಡನ್ ಬ್ಯಾಟ್ ಗೆದ್ದ ದಾಖಲೆಯನ್ನೂ ಹೊಂದಿದ್ದಾರೆ. ಅವರು 2013 ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

Pic credit: Google

ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಗೋಲ್ಡನ್ ಬ್ಯಾಟ್‌ಗಳನ್ನು ಗೆದ್ದ ಏಕೈಕ ಆಟಗಾರ ಎನಿಸಿಕೊಂಡಿರುವ ಧವನ್, ಈ ಪ್ರಶಸ್ತಿಯನ್ನು ಸತತ ಎರಡು ಬಾರಿ ಪಡೆದಿದ್ದಾರೆ.

Pic credit: Google

ಟೆಸ್ಟ್ಟೆಸ್ಟ್‌ನಲ್ಲಿ ಅತಿವೇಗದ ಶತಕ ಬಾರಿಸಿದ ದಾಖಲೆಯೂ ಶಿಖರ್ ಧವನ್ ಅವರ ಹೆಸರಿನಲ್ಲಿದೆ. ಅವರು ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 85 ಎಸೆತಗಳಲ್ಲಿ ಧವನ್ ಶತಕ ಸಿಡಿಸಿದ್ದರು.

Pic credit: Google

ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಧವನ್ ಬಿರುಸಿನ ಇನ್ನಿಂಗ್ಸ್ ಆಡಿ 174 ಎಸೆತಗಳಲ್ಲಿ 187 ರನ್ ಬಾರಿಸಿದರು. ಇದರೊಂದಿಗೆ ಟೆಸ್ಟ್ ಪಂದ್ಯದ ಮೊದಲ ದಿನ ಊಟಕ್ಕೂ ಮುನ್ನ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.