MRF ಕಂಪನಿಯಿಂದ ಗಿಲ್​ಗೆ ವರ್ಷಕ್ಕೆ ಸಿಗುವ ಹಣವೆಷ್ಟು?

6 march 2025

Pic credit: Google

ಪೃಥ್ವಿ ಶಂಕರ

ಶುಭ್​ಮನ್ ಗಿಲ್ ಅವರು MRF ಜೊತೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಇದು ಮಾರ್ಚ್ 4, 2025 ರಿಂದ ಜಾರಿಗೆ ಬರಲಿದೆ.

Pic credit: Google

ಒಪ್ಪಂದದ ಪ್ರಕಾರ, ಸೆಮಿಫೈನಲ್ ಪಂದ್ಯದಲ್ಲೂ ಕಂಡುಬಂದಂತೆ, ಗಿಲ್ ಈಗ ಸಿಯೆಟ್ ಬದಲಿಗೆ ತಮ್ಮ ಬ್ಯಾಟ್‌ನಲ್ಲಿ ಎಂಆರ್‌ಎಫ್ ಸ್ಟಿಕ್ಕರ್‌ನೊಂದಿಗೆ ಆಡಲಿದ್ದಾರೆ.

Pic credit: Google

ಈಗ ಪ್ರಶ್ನೆ ಏನೆಂದರೆ, ಶುಭ್‌ಮನ್ ಗಿಲ್ MRF ಜೊತೆಗಿನ ಒಪ್ಪಂದದಿಂದ ಒಂದು ವರ್ಷಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬುದು.

Pic credit: Google

ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗಿಂತ ಮೊದಲು ವಿರಾಟ್ ಜೊತೆ MRF ಒಪ್ಪಂದಕ್ಕೆ ಸಹಿ ಹಾಕಿತ್ತು.

Pic credit: Google

ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡು ಆಟವಾಡುವುದಕ್ಕೆ MRF ನಿಂದ ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಾರೆ.

Pic credit: Google

ಅದೇ ರೀತಿ, ಸಚಿನ್ ತೆಂಡೂಲ್ಕರ್ ಎಂಆರ್‌ಎಫ್ ಸ್ಟಿಕ್ಕರ್‌ನೊಂದಿಗೆ ಆಟವಾಡುತ್ತಿದ್ದಾಗ, ಅವರು ವಾರ್ಷಿಕವಾಗಿ 8 ಕೋಟಿ ರೂ.ಗಳನ್ನು ಪಡೆಯುತ್ತಿದ್ದರು.

Pic credit: Google

ವರದಿಯ ಪ್ರಕಾರ, ಶುಭ್​ಮನ್ ಗಿಲ್ MRF ನಿಂದ ವಾರ್ಷಿಕವಾಗಿ 8 ರಿಂದ 10 ಕೋಟಿ ರೂ. ಪಡೆಯುತ್ತಾರೆ. ಆದರೆ, ಇದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

Pic credit: Google