ಈ ಐಸಿಸಿ ಪ್ರಶಸ್ತಿಯನ್ನು ಗೆಲ್ಲುತ್ತಾರಾ ಸ್ಮೃತಿ ಮಂಧಾನ?

29 December 2024

Pic credit: Google

ಪೃಥ್ವಿ ಶಂಕರ

ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ರನ್ ಮಳೆಯನ್ನೇ ಹರಿಸುವ ಮೂಲಕ 2024 ಅನ್ನು ಅದ್ದೂರಿಯಾಗಿ ಕೊನೆಗೊಳಿಸಿದ್ದಾರೆ.

Pic credit: Google

ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಏಕದಿನ ಮತ್ತು ಟಿ20 ಸರಣಿಯಲ್ಲಿ ಮಂಧಾನ ಸತತ 5 ಅರ್ಧಶತಕಗಳನ್ನು ಸಿಡಿಸಿದ್ದರು. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧವೂ ಶತಕ ಗಳಿಸಿದ್ದರು.

Pic credit: Google

ಇದೀಗ ಮಂಧಾನ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಐಸಿಸಿ ವರ್ಷದ ದೊಡ್ಡ ಪ್ರಶಸ್ತಿಗೆ ಅವರನ್ನು ನಾಮನಿರ್ದೇಶನ ಮಾಡಿದೆ.

Pic credit: Google

ವಾಸ್ತವವಾಗಿ ಐಸಿಸಿ ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿಗೆ 4 ಸ್ಪರ್ಧಿಗಳನ್ನು ನಾಮನಿರ್ದೇಶನ ಮಾಡಿದೆ. ಇದರಲ್ಲಿ ಭಾರತದಿಂದ ಸ್ಮೃತಿ ಮಾತ್ರ ಸ್ಥಾನ ಪಡೆದಿದ್ದಾರೆ.

Pic credit: Google

ಟೀಂ ಇಂಡಿಯಾದ ಉಪನಾಯಕಿಯಾಗಿರುವ ಮಂಧಾನ ಈ ವರ್ಷ ಆಡಿರುವ 12 ಏಕದಿನ ಇನ್ನಿಂಗ್ಸ್‌ಗಳಲ್ಲಿ 747 ರನ್ ಗಳಿಸಿದ್ದಾರೆ. ಇದು ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯಾಗಿದೆ.

Pic credit: Google

ಈ ವಿಚಾರದಲ್ಲಿ ಮಂಧಾನ 12 ಇನ್ನಿಂಗ್ಸ್‌ಗಳಲ್ಲಿ 697 ರನ್ ಗಳಿಸಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ನಾಯಕಿ ಲಾರಾ ವೂಲ್‌ವರ್ತ್‌ಗೆ ಪೈಪೋಟಿ ನೀಡುತ್ತಿದ್ದಾರೆ.

Pic credit: Google

ಇವರಲ್ಲದೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಅನಾಬೆಲ್ ಸದರ್ಲ್ಯಾಂಡ್ (369 ರನ್, 13 ವಿಕೆಟ್) ಮತ್ತು ಶ್ರೀಲಂಕಾ ನಾಯಕ ಚಾಮರಿ ಅಟಪಟ್ಟು (458 ರನ್, 9 ವಿಕೆಟ್) ಸಹ ಈ ಪ್ರಶಸ್ತಿಗೆ ಸ್ಪರ್ಧಿಗಳಾಗಿದ್ದಾರೆ.

Pic credit: Google