ನಿತೀಶ್ ರೆಡ್ಡಿಯ ಭವಿಷ್ಯವನ್ನೇ ಬದಲಿಸಿದ 400 ಕೋಟಿಯ ಒಡತಿ

29 December 2024

Pic credit: Google

ಪೃಥ್ವಿ ಶಂಕರ

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿತೀಶ್ ಕುಮಾರ್ ರೆಡ್ಡಿ ಟೀಂ ಇಂಡಿಯಾದ ಹೊಸ ಅನ್ವೇಷಣೆ ಎಂದು ಸಾಬೀತುಪಡಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಅವರು ತಂಡಕ್ಕಾಗಿ ದಿಟ್ಟ ಪ್ರದರ್ಶನ ನೀಡುತ್ತಿದ್ದಾರೆ.

Pic credit: Google

ಈ ವರ್ಷ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ನಂತರ ಆಸ್ಟ್ರೇಲಿಯಾ ಸರಣಿಯಲ್ಲಿ ಟೆಸ್ಟ್‌ಗೆ ನೇರ ಅವಕಾಶ ಪಡೆದರು.

Pic credit: Google

ಇದುವರೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿರುವ ನಿತೀಶ್ ಇದಲ್ಲದೇ ಚೆಂಡಿನಲ್ಲೂ ಉತ್ತಮ ಕೊಡುಗೆ ನೀಡಿದ್ದಾರೆ.

Pic credit: Google

ನಿತೀಶ್ ಕುಮಾರ್ ರೆಡ್ಡಿ ಅವರನ್ನು ಟೀಂ ಇಂಡಿಯಾಕ್ಕೆ ಕರೆತರುವಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಪಾತ್ರ ದೊಡ್ಡದಿದೆ.

Pic credit: Google

ಐಪಿಎಲ್ 2023ರ ಹರಾಜಿನಲ್ಲಿ ಕಾವ್ಯಾ ಮಾರನ್ ಅವರು ನಿತೀಶ್ ಕುಮಾರ್ ರೆಡ್ಡಿ ಅವರನ್ನು 20 ಲಕ್ಷ ರೂ.ಗೆ ತಂಡಕ್ಕೆ ಖರೀದಿಸಿದ್ದರು. ಅಂದಿನಿಂದ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವು ಕಂಡುಬಂದಿದೆ.

Pic credit: Google

ಕಾವ್ಯಾ ಮಾರನ್ ಅವರು ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಏಕೈಕ ಪುತ್ರಿ. ವರದಿಗಳ ಪ್ರಕಾರ ಕಾವ್ಯಾ ಅವರ ಆಸ್ತಿ ಸುಮಾರು 400 ಕೋಟಿ ರೂ. ಎಂದು ಹೇಳಲಾಗುತ್ತದೆ.

Pic credit: Google

ನಿತೀಶ್ ಐಪಿಎಲ್ 2023 ರಲ್ಲಿ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಆದರೆ 2024 ರಲ್ಲಿ 13 ಪಂದ್ಯಗಳನ್ನಾಡಿದ್ದ ನಿತೀಶ್ 303 ರನ್ ಜೊತೆಗೆ 3 ವಿಕೆಟ್ಗಳನ್ನು ಸಹ ಪಡೆದರು.

Pic credit: Google

2024 ರ ಐಪಿಎಲ್‌ನಲ್ಲಿ ಮಿಂಚಿದ ನಿತೀಶ್ ರೆಡ್ಡಿಗೆ ಆ ಬಳಿಕವೇ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿತು. ಈಗ ಅವರು ನಿಧಾನವಾಗಿ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಿದ್ದಾರೆ.

Pic credit: Google

ಸನ್‌ರೈಸರ್ಸ್ ಹೈದರಾಬಾದ್ ಕೂಡ ನಿತೀಶ್ ರೆಡ್ಡಿಯನ್ನು ಐಪಿಎಲ್ 2025 ಕ್ಕೆ ತಂಡದಲ್ಲಿ ಉಳಿಸಿಕೊಂಡಿದ್ದು, ಕಾವ್ಯ ಮಾರನ್ ಅವರಿಗಾಗಿ 6 ​​ಕೋಟಿ ರೂ. ವ್ಯಯಿಸಿದ್ದಾರೆ.

Pic credit: Google