8 ವರ್ಷಗಳಲ್ಲಿ ಸತತ 100 ಪಂದ್ಯ; ದಾಖಲೆ ಬರೆದ ಆಂಗ್ಲ ಮಹಿಳಾ ಕ್ರಿಕೆಟರ್
09 December 2024
Pic credit: Google
ಪೃಥ್ವಿ ಶಂಕರ
ಯಾವುದೇ ಆಟಗಾರನಿಗೆ 100 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವುದು ದೊಡ್ಡ ಸಾಧನೆಯಾಗಿದೆ. ಅದರಲ್ಲೂ ಒಂದೇ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳದೆ 100 ಪಂದ್ಯಗಳನ್ನು ಆಡುವುದು ಅಪರೂಪದಲ್ಲೇ ಅಪರೂಪದ ಸಂಗತಿಯಾಗಿದೆ.
Pic credit: Google
ಇದೀಗ ಈ ಸಾಧನೆಯನ್ನು ಇಂಗ್ಲೆಂಡಿನ ಮಹಿಳಾ ತಂಡದ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಮಾಡಿದ್ದಾರೆ. ಅವರು ಸತತ 100 ಏಕದಿನ ಪಂದ್ಯಗಳನ್ನು ಆಡಿದ ದಾಖಲೆ ಬರೆದಿದ್ದಾರೆ.
Pic credit: Google
ಇಂಗ್ಲೆಂಡ್ನ ಅನುಭವಿ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಸತತ 100 ಏಕದಿನ ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ.
Pic credit: Google
ಇದು 33 ವರ್ಷದ ಬ್ಯೂಮಾಂಟ್ ಅವರ ಏಕದಿನ ವೃತ್ತಿಜೀವನದ 123 ನೇ ಪಂದ್ಯವಾಗಿದ್ದು, ಈ ಪೈಕಿ ಅವರು ಕಳೆದ 8 ವರ್ಷಗಳಲ್ಲಿ ಸತತ 100 ಪಂದ್ಯಗಳನ್ನು ಆಡಿದ್ದಾರೆ.
Pic credit: Google
ಜೂನ್ 2016 ರಿಂದ ಡಿಸೆಂಬರ್ 2024 ರವರೆಗೆ ಇಂಗ್ಲೆಂಡ್ ಮಹಿಳಾ ತಂಡದ ಎಲ್ಲಾ 100 ಪಂದ್ಯಗಳನ್ನು ಆಡುವ ಮೂಲಕ ಈ ಬ್ಯಾಟರ್ ಈ ವಿಶೇಷ ಮೈಲಿಗಲ್ಲನ್ನು ಸಾಧಿಸಿದ್ದಾರೆ.
Pic credit: Google
ಈ 100 ಏಕದಿನ ಪಂದ್ಯಗಳಲ್ಲಿ, ಬ್ಯೂಮಾಂಟ್ 97 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು, 43.68 ಸರಾಸರಿಯಲ್ಲಿ 3932 ರನ್ ಕಲೆಹಾಕಿದ್ದಾರೆ. ಅವರ ಏಕದಿನ ವೃತ್ತಿಜೀವನದ ಎಲ್ಲಾ 10 ಶತಕಗಳು ಈ ಅವಧಿಯಲ್ಲಿ ಬಂದಿವೆ.
Pic credit: Google
ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕಗಳನ್ನು ಗಳಿಸಿರುವ ಟಮ್ಮಿ ಬ್ಯೂಮಾಂಟ್, 2009 ರಲ್ಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇದುವರೆಗೆ 123 ಪಂದ್ಯಗಳನ್ನಾಡಿರುವ ಅವರು 4139 ರನ್ ಗಳಿಸಿದ್ದಾರೆ.