ಟೀಂ ಇಂಡಿಯಾ ಕೋಚ್ ಆಗಿ ಗಂಭೀರ್ ಆಯ್ಕೆ; ಪತ್ನಿ ನತಾಶಾ ರಿಯಾಕ್ಷನ್ ವೈರಲ್

10 July 2024

Pic credit - Google

ಪೃಥ್ವಿಶಂಕರ

Pic credit -  Google

ರಾಹುಲ್ ದ್ರಾವಿಡ್ ಬದಲಿಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡುವ ಮೂಲಕ ಬಿಸಿಸಿಐ ಸಸ್ಪೆನ್ಸ್‌ಗೆ ಅಂತ್ಯ ಹಾಡಿದೆ.

ಗೌತಮ್ ಗಂಭೀರ್

Pic credit -  Google

ಈ ವರ್ಷ ಐಪಿಎಲ್‌ನಲ್ಲಿ ಕೆಕೆಆರ್‌ನ ಮೆಂಟರ್ ಆಗಿ ಗಂಭೀರ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರೇ ಟೀಂ ಇಂಡಿಯಾ ಕೋಚ್ ಆಗಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು.

 ಮುಖ್ಯ ಕೋಚ್

Pic credit -  Google

ಇದೀಗ ಗಂಭೀರ್ ಕೋಚ್ ಆಗಿ ಆಯ್ಕೆಯಾದ ಬಳಿಕ ಅಭಿಮಾನಿಗಳು ನಾನಾ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಸಂಚಿಕೆಯಲ್ಲಿ ಗಂಭೀರ್ ಪತ್ನಿ ನತಾಶಾ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನತಾಶಾ ಪ್ರತಿಕ್ರಿಯೆ

Pic credit -  Google

ಗಂಭೀರ್ ಅವರ ಪತ್ನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ‘ಏಕೆಂದರೆ ಅವರು ಭಾರತ ತಂಡದ ಕೋಚ್ ಆಗಲು ಮತ್ತು ತಂಡವನ್ನು ಮುನ್ನಡೆಸಲು ಅರ್ಹರಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಗಂಭೀರ್ ಅರ್ಹರು

Pic credit -  Google

ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೆಕೆಆರ್ ಈ ಸೀಸನ್​ನಲ್ಲಿ ಮೂರನೇ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು.

 ಐಪಿಎಲ್ ಚಾಂಪಿಯನ್

Pic credit -  Google

ಇನ್ನು ಕೋಚ್ ಆಗಿ ಆಯ್ಕೆಯಾದ ಬಳಿಕ ಹೇಳಿಕೆ ನೀಡಿರುವ ಗಂಭೀರ್ ಹೊಸ ಪಾತ್ರವನ್ನು ವಹಿಸಿಕೊಳ್ಳಲು ನನಗೆ ಗೌರವ ಮತ್ತು ಉತ್ಸುಕತೆ ಇದೆ ಎಂದಿದ್ದಾರೆ.

ಉತ್ಸುಕತೆ ಇದೆ

Pic credit -  Google

ಇದೀಗ ಕೋಚ್ ಆಗಿ ಆಯ್ಕೆಯಾಗಿರುವ ಗಂಭೀರ್ ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸದೊಂದಿಗೆ ತಮ್ಮ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

 ಲಂಕಾ ಪ್ರವಾಸ