ಈ ವಿಶ್ವಕಪ್ ಅನ್ನು ಸೇರಿ ಇದುವರೆಗೆ ನಡೆದಿರುವ 13 ಆವೃತ್ತಿಗಳ ಏಕದಿನ ವಿಶ್ವಕಪ್‌ನಲ್ಲಿ ಶತಕ ಸಿಡಿಸಿರುವ ಅತ್ಯಂತ ಹಿರಿಯ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
08 November 2023
ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಈ ಪಟ್ಟಿಯಲಕ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 2015ರ ಏಕದಿನ ವಿಶ್ವಕಪ್‌ನಲ್ಲಿ 104 ರನ್ ಸಿಡಿಸಿದ್ದರು. ಆಗ ಅವರಿಗೆ 39 ವರ್ಷ ವಯಸ್ಸಾಗಿತ್ತು.
ದಿಲ್ಶನ್ ನಂತರ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಇದ್ದಾರೆ. 1987ರ ವಿಶ್ವಕಪ್‌ನಲ್ಲಿ ಭಾರತದ ಪರ ಗವಾಸ್ಕರ್ 103 ರನ್ ಬಾರಿಸಿದ್ದರು. ಆಗ ಅವರ ವಯಸ್ಸು 38 ವರ್ಷ 116 ದಿನಗಳಾಗಿದ್ದವು.
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಸಚನಿನ್ 111 ರನ್ ಗಳಿಸಿದ್ದರು. ಆಗ ಮಾಸ್ಟರ್ ಬ್ಲಾಸ್ಟರ್ ಅವರ ವಯಸ್ಸು 37 ವರ್ಷ 322 ದಿನಗಳು.
ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರುವ ಸನತ್ ಜಯಸೂರ್ಯ 2007 ರ ವಿಶ್ವಕಪ್‌ನಲ್ಲಿ 115 ರನ್ ಬಾರಿಸಿದ್ದರು. ಆಗ ಅವರಿಗೆ 37 ವರ್ಷ ಮತ್ತು 275 ದಿನಗಳಾಗಿದ್ದವು.
ಐದನೇ ಸ್ಥಾನದಲ್ಲಿರುವ ಮಹೇಲಾ ಜಯವರ್ಧನೆ 2015ರ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ್ದರು. ಆ ಸಮಯದಲ್ಲಿ ಅವರ ವಯಸ್ಸು 37 ವರ್ಷ 271 ದಿನಗಳು.
ಬಾಂಗ್ಲಾದೇಶದ ಮಹಮ್ಮದುಲ್ಲಾ ಪ್ರಸಕ್ತ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ವಾಂಖೆಡೆಯಲ್ಲಿ ಶತಕ ಬಾರಿಸಿದಾಗ ಅವರಿಗೆ 37 ವರ್ಷ 262 ದಿನಗಳಾಗಿದ್ದವು.