01 August 2024
Pic credit - Google
ಪೃಥ್ವಿಶಂಕರ
Pic credit - Google
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ಈ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದವರಿಗೆ ಪ್ರತಿಯೊಂದು ದೇಶದಲ್ಲೂ ವಿಭಿನ್ನ ಬಹುಮಾನದ ಹಣವನ್ನು ನೀಡಲಾಗುತ್ತದೆ.
Pic credit - Google
ಜರ್ಮನಿಯಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆದ್ದ ಆಟಗಾರರಿಗೆ 18 ಲಕ್ಷ ರೂ. ಬೆಳ್ಳಿ ಪದಕಕ್ಕೆ 13 ಲಕ್ಷ ರೂ. ಹಾಗೂ ಕಂಚಿನ ಪದಕಕ್ಕೆ 9 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ.
Pic credit - Google
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ಆಟಗಾರರಿಗೆ 31 ಲಕ್ಷ ರೂ. ಬೆಳ್ಳಿ ಪದಕಕ್ಕೆ 18 ಲಕ್ಷ ರೂ. ಕಂಚಿನ ಪದಕಕ್ಕೆ 12 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
Pic credit - Google
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತನ್ನ ಆಟಗಾರರಿಗೆ ಫ್ರಾನ್ಸ್ ದೇಶ 59 ಲಕ್ಷ ರೂ. ಬೆಳ್ಳಿ ಪದಕಕ್ಕೆ 22 ಲಕ್ಷ ರೂ. ಕಂಚಿನ ಪದಕಕ್ಕೆ 13 ಲಕ್ಷ ರೂ. ಬಹುಮಾನ ನೀಡಲಿದೆ.
Pic credit - Google
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸ್ಪೇನ್ ಆಟಗಾರರಿಗೆ 89 ಲಕ್ಷ ರೂ. ಬೆಳ್ಳಿ ಪದಕಕ್ಕೆ 44 ಲಕ್ಷ ರೂ. ಕಂಚಿನ ಪದಕಕ್ಕೆ 27 ಲಕ್ಷ ರೂ. ಬಹುಮಾನ ಸಿಗಲಿದೆ.
Pic credit - Google
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಆಟಗಾರರಿಗೆ ಇಟಲಿ ದೇಶದಲ್ಲಿ 1 ಕೋಟಿ 65 ಲಕ್ಷ ರೂ. ಬೆಳ್ಳಿ ಪದಕಕ್ಕೆ 82 ಲಕ್ಷ ರೂ. ಕಂಚಿನ ಪದಕಕ್ಕೆ 55 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
Pic credit - Google
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತನ್ನ ಆಟಗಾರರಿಗೆ ಮೊರಾಕೊ 1 ಕೋಟಿ 84 ಲಕ್ಷ ರೂ. ಬೆಳ್ಳಿ ಪದಕಕ್ಕೆ 1 ಕೋಟಿ 14 ಲಕ್ಷ ರೂ. ಕಂಚಿನ ಪದಕಕ್ಕೆ 68 ಲಕ್ಷ ರೂ. ಬಹುಮಾನ ನೀಡುತ್ತದೆ.
Pic credit - Google
ತೈವಾನ್‌ನಲ್ಲಿ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಆಟಗಾರರಿಗೆ ಅಂದಾಜು 6 ಕೋಟಿ ರೂ. ಬೆಳ್ಳಿ ಪದಕಕ್ಕೆ 2 ಕೋಟಿ ರೂ., ಕಂಚಿನ ಪದಕಕ್ಕೆ 1 ಕೋಟಿ 50 ಲಕ್ಷ ರೂ. ನೀಡಲಾಗುತ್ತದೆ.
Pic credit - Google
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಿಂಗಾಪುರದ ಆಟಗಾರರಿಗೆ ಗರಿಷ್ಠ 6 ಕೋಟಿ 20 ಲಕ್ಷ ರೂ. ಬೆಳ್ಳಿ ಪದಕಕ್ಕೆ 3 ಕೋಟಿ ರೂ., ಕಂಚಿನ ಪದಕಕ್ಕೆ 1 ಕೋಟಿ 50 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
Pic credit - Google
ಭಾರತದಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಆಟಗಾರರಿಗೆ ಬಹುಮಾನದ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ಪ್ರತಿ ಬಾರಿಯೂ ಸರ್ಕಾರ ಹೊಸ ಘೋಷಣೆ ಮಾಡುತ್ತದೆ. ಇದಲ್ಲದೇ ರಾಜ್ಯ ಸರ್ಕಾರಗಳು ಬಹುಮಾನವನ್ನು ನೀಡುತ್ತವೆ.