ವಿರಾಟ್ ಕೊಹ್ಲಿ ಬಳಿ ಎಷ್ಟು ಮನೆಗಳಿವೆ? ಅವುಗಳ ಬೆಲೆ ಎಷ್ಟು?
17 January 2025
Pic credit: Google
ಪೃಥ್ವಿ ಶಂಕರ
ಆಧುನಿಕ ಕ್ರಿಕೆಟ್‌ನ ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತನ್ನ ಹೆಸರಿನ ಜೊತೆಗೆ ಈ ಆಟದಿಂದ ಸಾಕಷ್ಟು ಹಣವನ್ನೂ ಸಂಪಾಧಿಸಿದ್ದಾರೆ.
Pic credit: Google
ಪ್ರಸ್ತುತ ಕೊಹ್ಲಿ ಬಿಸಿಸಿಐನಿಂದ ವರ್ಷಕ್ಕೆ 7 ಕೋಟಿ ಮತ್ತು ಐಪಿಎಲ್‌ನಲ್ಲಿ 21 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಪಂದ್ಯ ಶುಲ್ಕ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕವೂ ಕೋಟಿಗಟಲ್ಲೇ ಹಣ ಸಂಪಾಧಿಸಿದ್ದಾರೆ.
Pic credit: Google
ವರದಿಗಳ ಪ್ರಕಾರ, ವಿರಾಟ್ ಕೊಹ್ಲಿಯ ಪ್ರಸ್ತುತ ನಿವ್ವಳ ಮೌಲ್ಯ 1050 ಕೋಟಿ ಎಂದು ಹೇಳಲಾಗುತ್ತದೆ.
Pic credit: Google
ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು, ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ವಿವಿಧೆಡೆ 4 ಮನೆಗಳನ್ನು ಖರೀದಿಸಿದ್ದಾರೆ
Pic credit: Google
ಮ್ಯಾಜಿಕ್‌ಬ್ರಿಕ್ಸ್‌ನ ವರದಿ ಪ್ರಕಾರ, ವಿರಾಟ್ ಕೊಹ್ಲಿ ಗುರುಗ್ರಾಮ್‌ನಲ್ಲಿ 10 ಸಾವಿರ ಚದರ ಅಡಿಯ ಮನೆಯನ್ನು ಖರೀದಿಸಿದ್ದಾರೆ. ಅದರ ಬೆಲೆ 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
Pic credit: Google
ಮುಂಬೈನ ವರ್ಲಿ ಪ್ರದೇಶದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಸಮುದ್ರಕ್ಕೆ ಎದುರಾಗಿರುವ ಅಪಾರ್ಟ್‌ಮೆಂಟ್ ಹೊಂದಿದ್ದು, ಅದರೆ ಬೆಲೆ ಅಂದಾಜು 34 ಕೋಟಿ ರೂ.
Pic credit: Google
ಇವುಗಳ ಜೊತೆಗೆ ಕೊಹ್ಲಿಗೆ ಅಲಿಬಾಗ್‌ನಲ್ಲೂ ಮನೆಯಿದ್ದು, ವರದಿ ಪ್ರಕಾರ ಇದರ ಅಂದಾಜು ಬೆಲೆ 19 ಕೋಟಿ ರೂ.
Pic credit: Google
ವರದಿ ಪ್ರಕಾರ, ವಿರಾಟ್ ಕೊಹ್ಲಿ ಮುಂಬೈನ ಜುಹುದಲ್ಲಿ ಮತ್ತೊಂದು ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅದನ್ನು ಅವರು ಬಾಡಿಗೆಗೆ ನೀಡಿದ್ದು, ಪ್ರತಿ ತಿಂಗಳು 2.76 ಲಕ್ಷ ರೂ. ಬಾಡಿಗೆ ಪಡೆಯುತ್ತಿದ್ದಾರೆ.