ರಣಜಿ ಟ್ರೋಫಿ ಜನವರಿ 23 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ರೋಹಿತ್, ಪಂತ್, ಜೈಸ್ವಾಲ್, ಗಿಲ್ ಮತ್ತು ವಿರಾಟ್ ಅವರಂತಹ ದಿಗ್ಗಜರು ಆಡುವುದನ್ನು ಕಾಣಬಹುದು.
Pic credit: Google
ಆದರೆ ಹಲವು ವರ್ಷಗಳ ನಂತರ ರಣಜಿ ಟ್ರೋಫಿ ಆಡುತ್ತಿರುವ ಹಾಗೂ ಪ್ರಸ್ತುತ ಆಡುತ್ತಿರುವ ಆಟಗಾರರಿಗೆ ಸಿಗುವ ಸಂಭಾವನೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
Pic credit: Google
ವರದಿ ಪ್ರಕಾರ ರೋಹಿತ್, ಪಂತ್, ಜೈಸ್ವಾಲ್, ಗಿಲ್ ಮತ್ತು ವಿರಾಟ್ ರಣಜಿ ಆಡಿದರೆ ದಿನಕ್ಕೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.
Pic credit: Google
ಅಂದರೆ, ಈ ಸ್ಟಾರ್ ಆಟಗಾರರು ಒಂದು ಪಂದ್ಯವನ್ನು ಆಡಿದರೆ ಅವರಿಗೆ 3 ಲಕ್ಷ ವೇತನ ಸಿಗಲಿದೆ.
Pic credit: Google
ರಣಜಿಯ ಪ್ರಸ್ತುತ ವೇತನದ ಪ್ರಕಾರ, 41 ರಿಂದ 60 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಆಟಗಾರರು ಪ್ಲೇಯಿಂಗ್ XI ನಲ್ಲಿದ್ದರೆ ಅವರಿಗೆ ದಿನಕ್ಕೆ 60000 ರೂ. ವೇತನ ಸಿಗಲಿದೆ.
Pic credit: Google
ಆದರೆ ಅವರು ಆಡುವ ಹನ್ನೊಂದರ ಬಳಗದಿಂದ ಹೊರಗಿದ್ದರೆ ಅವರಿಗೆ ಅರ್ಧದಷ್ಟು ವೇತನ ನೀಡಲಾಗುತ್ತದೆ. ಅಂದರೆ ತಂಡದಿಂದ ಹೊರಗಿರುವವರಿಗೆ 30 ಸಾವಿರ ರೂ ದಿನದ ವೇತನ ಸಿಗಲಿದೆ.
Pic credit: Google
ಅದೇ ರೀತಿ, 21 ರಿಂದ 40 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಆಟಗಾರರು ಪ್ಲೇಯಿಂಗ್ XI ನಲ್ಲಿದ್ದರೆ ಅವರಿಗೆ ದಿನಕ್ಕೆ 50,000 ರೂ. ವೇತನ ಸಿಗಲಿದೆ.
Pic credit: Google
ಹಾಗೆಯೇ 40 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವವರಿಗೆ 40,000 ರೂ ವೇತನ ಸಿಗಲಿದೆ. ಆದರೆ ಅವರು ಆಡುವ ಹನ್ನೊಂದರ ಬಳಗದಿಂದ ಹೊರಗಿದ್ದರೆ ಅವರಿಗೆ ಅರ್ಧದಷ್ಟು ವೇತನ ನೀಡಲಾಗುತ್ತದೆ.