ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳ ನಡುವಿನ ಕಾಳಗ ಅಕ್ಟೋಬರ್ 11 ರಂದು (ಬುಧವಾರ) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲ್ಲಿದೆ.
ಇನ್ನು ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ಏಕೆಂದರೆ ಆಸೀಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಬದಲಾವಣೆಯ ಮಾತುಗಳನ್ನಾಡಿದ್ದರು.
ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗಿರುವ ಶುಭ್ಮನ್ ಗಿಲ್ ಅಫ್ಘಾನ್ ವಿರುದ್ಧವೂ ಕಣಕ್ಕಿಳಿಯುವುದಿಲ್ಲ ಎಂಬ ಮಾತು ಕೇಳಿಬಂದಿದೆ.
ಹೀಗಾಗಿ ಗಿಲ್ ಆಡದಿದ್ದರೆ ಮತ್ತೊಮ್ಮೆ ಕಿಶನ್ಗೆ ಓಪನಿಂಗ್ ಮಾಡುವ ಅವಕಾಶ ಸಿಗಲಿದೆ.
ಇನ್ನು ಬ್ಯಾಟಿಂಗ್ನಲ್ಲಿ ಶೂನ್ಯ ಸುತ್ತಿದ ಶ್ರೇಯಸ್ ಅಯ್ಯರ್ ಬದಲು ಸೂರ್ಯನಿಗೆ ಅವಕಾಶ ಸಿಕ್ಕರೂ ಸಿಗಬಹುದು.
ಆಸೀಸ್ ವಿರುದ್ಧ ಇಬ್ಬರು ಪ್ರಮುಖ ವೇಗಿಗಳೊಂದಿಗೆ ಭಾರತ ಕಣಕ್ಕಿಳಿದಿದ್ದು, ಮೂವರು ಸ್ಪಿನ್ನರ್‌ಗಳನ್ನು ಆಡಿಸಿತ್ತು.
ಆದರೆ ಅಫ್ಘಾನಿಸ್ತಾನ ವಿರುದ್ಧ ಇಬ್ಬರ ಬದಲಾಗಿ ಮೂವರು ವೇಗಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ.
ಏಕೆಂದರೆ ಆಸೀಸ್ ವಿರುದ್ಧ 3ನೇ ಬೌಲಿಂಗ್ ಆಯ್ಕೆಯಾಗಿದ್ದ ಹಾರ್ದಿಕ್ ಪಾಂಡ್ಯ ದುಬಾರಿಯಾಗಿದ್ದರು.
ಇದನ್ನೂ ಓದಿ