ಐಪಿಎಲ್ ಹರಾಜಿನಲ್ಲಿ ಹಣ ಸುರಿಯುವುದರಲ್ಲಿ ಆರ್​ಸಿಬಿಯೇ ನಂ.1..!

18 November 2024

Pic credit: Google

ಪೃಥ್ವಿ ಶಂಕರ

Pic credit: Google

ನವೆಂಬರ್ 24-25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ 2025 ಸೀಸನ್‌ಗಾಗಿ ಮೆಗಾ ಹರಾಜು ನಡೆಯಲಿದ್ದು, ಆಟಗಾರರ ಮೇಲೆ ಹಣದ ಮಳೆಯೇ ಹರಿಯಲಿದೆ.

Pic credit: Google

Pic credit: Google

ಈ ಬಾರಿ 574 ಆಟಗಾರರ ಹರಾಜು ನಡೆಯಲಿದ್ದು, ಈ ಪೈಕಿ 204 ಸ್ಲಾಟ್​ಗಳು ಭರ್ತಿಯಾಗಲಿವೆ. ಅಂದರೆ ಅಂತಿಮವಾಗಿ 204 ಆಟಗಾರರು ಹರಾಜಾಗಲಿದ್ದಾರೆ.

Pic credit: Google

Pic credit: Google

ಈ ಬಾರಿ ಹರಾಜಿನಲ್ಲಿ ಹೆಚ್ಚು ಹಣ ಖರ್ಚಾಗುವುದು ಖಚಿತ ಏಕೆಂದರೆ ಈ ಬಾರಿ ಎಲ್ಲಾ 10 ತಂಡಗಳ ಹರಾಜು ಪರ್ಸ್ 120 ಕೋಟಿ ರೂ.ಗೆ ಏರಿಕೆಯಾಗಿದೆ.

Pic credit: Google

Pic credit: Google

ಆದರೆ ಐಪಿಎಲ್​ನ ಕಳೆದ 17 ಸೀಸನ್​ಗಳ ಇತಿಹಾಸದಲ್ಲಿ ಯಾವ ಫ್ರಾಂಚೈಸಿ ಇಲ್ಲಿಯವರೆಗೂ ಹೆಚ್ಚು ಹಣ ಖರ್ಚು ಮಾಡಿದೆ ಎಂಬುದನ್ನು ನೋಡುವುದಾದರೆ..

Pic credit: Google

Pic credit: Google

ನಾವು ಹೆಚ್ಚು ಹಣವನ್ನು ಖರ್ಚು ಮಾಡಿದ ಫ್ರಾಂಚೈಸಿಗಳ ಬಗ್ಗೆ ಮಾತನಾಡಿದರೆ, ಈ 17 ವರ್ಷಗಳಲ್ಲಿ ನಡೆದ 17 ಹರಾಜುಗಳಲ್ಲಿ (ಮೆಗಾ ಮತ್ತು ಮಿನಿ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಗರಿಷ್ಠ 1100.91 ಕೋಟಿ ರೂ. ಹಣ ಖರ್ಚು ಮಾಡಿದೆ.

Pic credit: Google

Pic credit: Google

ಮುಂಬೈ ಇಂಡಿಯನ್ಸ್ ಈ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದು, 17 ಆವೃತ್ತಿಗಳ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಮುಂಬೈ ಒಟ್ಟು 1077.34 ಕೋಟಿ ರೂ. ವ್ಯಯಿಸಿದೆ.

Pic credit: Google

Pic credit: Google

ಹರಾಜಿಗೆ ಸಂಬಂಧಿಸಿದಂತೆ, ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಒಟ್ಟು 551.7 ಕೋಟಿ ರೂ. ಖರ್ಚು ಮಾಡಿದ್ದವು. ಆದರೆ ಈ ಬಾರಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ.

Pic credit: Google