ಟಿ20 ಸರಣಿಯಿಂದ ಜೈಸ್ವಾಲ್, ಪಂತ್ ಮತ್ತು ಗಿಲ್ರನ್ನು ಕೈಬಿಟ್ಟಿದ್ಯಾಕೆ?
12 January 2025
Pic credit: Google
ಪೃಥ್ವಿ ಶಂಕರ
ಜನವರಿ 23 ರಿಂದ ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
Pic credit: Google
ಆದರೆ ಈ ಸರಣಿಗೆ ತಂಡದ ಸ್ಟಾರ್ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ಶುಭಮನ್ ಗಿಲ್, ಆಯ್ಕೆಯಾಗಿಲ್ಲ.
Pic credit: Google
ಹೀಗಾಗಿ ಈ ಮೂವರನ್ನು ತಂಡದಿಂದ ಕೈಬಿಟ್ಟಿದ್ಯಾಕೆ ಎಂಬ ಚರ್ಚೆ ಜೋರಾಗಿದೆ. ಆದರೆ, ಅವರನ್ನು ಈ ಸರಣಿಯಿಂದ ಕೈಬಿಡಲು ಕಾರಣ ಏನೆಂಬುದು ಬಹಿರಂಗವಾಗಿದೆ.
Pic credit: Google
ಬಾರ್ಡರ್-ಗವಾಸ್ಕರ್ ಟ್ರೋಫಿ ನಂತರ ಈ ಮೂವರು ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ ಎಂದು ವರದಿಯಾದೆ.
Pic credit: Google
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಈ ಮೂವರನ್ನು ಕೈಬಿಡಲಾಗಿದೆ.
Pic credit: Google
ಇದರರ್ಥ ಈ ಮೂವರು ಆಟಗಾರರು ಏಕದಿನ ಸರಣಿಗೆ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದ್ದು, ಹೀಗಾಗಿಯೇ ಅವರನ್ನು ಹೊರಗಿಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Pic credit: Google
ಪಂತ್ ಮತ್ತು ಯಶಸ್ವಿ ಆಸ್ಟ್ರೇಲಿಯಾ ವಿರುದ್ಧ ಎಲ್ಲಾ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಗಿಲ್ ಮೂರು ಪಂದ್ಯಗಳಲ್ಲಿ ತಂಡದ ಪರ ಕಣಕ್ಕಿಳಿದಿದ್ದರು.