WPL 2025: ಎಲ್ಲಾ 5 ಫ್ರಾಂಚೈಸಿಗಳ ಬಳಿ ಉಳಿದಿರುವ ಹಣವೆಷ್ಟು?

07 November 2024

Pic credit: Google

ಪೃಥ್ವಿ ಶಂಕರ

ಐಪಿಎಲ್‌ನಂತೆ, ಮಹಿಳಾ ಪ್ರೀಮಿಯರ್ ಲೀಗ್ 2025 ರ ಮಿನಿ ಹರಾಜಿಗೂ ಮುಂಚೆಯೇ, ಎಲ್ಲಾ ತಂಡಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿವೆ.

Pic credit: Google

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 5 ತಂಡಗಳು ಆಡುತ್ತಿದ್ದು, ಪ್ರತಿ ತಂಡವು ಆರು ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ 18 ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು.

Pic credit: Google

ಆ ಪ್ರಕಾರ ಎಲ್ಲಾ ಫ್ರಾಂಚೈಸಿಗಳು ತಮಗೆ ಅಗತ್ಯವಿರುವ ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಮಿಕ್ಕವನ್ನು ಬಿಡುಗಡೆ ಮಾಡಿದೆ. ಅಂತಿಮವಾಗಿ ಎಲ್ಲಾ ಫ್ರಾಂಚೈಸಿಗಳ ಬಳಿ ಎಷ್ಟು ಹಣವಿದೆ ಎಂಬುದನ್ನು ನೋಡುವುದಾದರೆ..

Pic credit: Google

ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಒಟ್ಟು 14 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಇದೀಗ ತಂಡದ ಬಳಿ 3.25 ಕೋಟಿ ರೂಪಾಯಿ ಉಳಿದಿದ್ದು, ಗರಿಷ್ಠ 4 ಆಟಗಾರ್ತಿಯರನ್ನು ಖರೀದಿಸಬಹುದು.

Pic credit: Google

ಗುಜರಾತ್ ಜೈಂಟ್ಸ್ ತಂಡದ ಬಳಿ ಗರಿಷ್ಠ 4.40 ಕೋಟಿ ರೂ. ಹಣವ ಉಳಿದಿದೆ. ತಂಡದಲ್ಲಿ ಕೇವಲ 4 ಸ್ಥಾನಗಳು ಖಾಲಿ ಉಳಿದಿವೆ.

Pic credit: Google

ಯುಪಿ ವಾರಿಯರ್ಸ್ ತಂಡದ ಪರ್ಸ್‌ನಲ್ಲಿ 3.90 ಕೋಟಿ ರೂ. ಇದ್ದು, ಹರಾಜಿನಲ್ಲಿ ಗರಿಷ್ಠ 3 ಆಟಗಾರ್ತಿಯರನ್ನು ಖರೀದಿಸಬಹುದು.

Pic credit: Google

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈಗ ತಮ್ಮ ಪರ್ಸ್‌ನಲ್ಲಿ 2.65 ಕೋಟಿ ರೂ. ಉಳಿಸಿಕೊಂಡಿದ್ದು, ಹರಾಜಿನಲ್ಲಿ ಗರಿಷ್ಠ 4 ಆಟಗಾರ್ತಿಯರನ್ನು ಖರೀದಿಸಬಹುದು.

Pic credit: Google

ದೆಹಲಿ ಕ್ಯಾಪಿಟಲ್ಸ್ ಬಳಿ ಅತ್ಯಂತ ಕಡಿಮೆ ಮೊತ್ತವಿದ್ದು, ತಂಡ ಕೇವಲ 2.5 ಕೋಟಿ ರೂಗಳಲ್ಲಿ 4 ಆಟಗಾರ್ತಿಯರನ್ನು ಖರೀದಿಸಬಹುದು.

Pic credit: Google