ಭೂ ಕೈಲಾಸ ಎಂದೇ ಕರೆಯಲ್ಪಡುವ ಕಾರಿಂಜೇಶ್ವರ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು?

ಶ್ರೀಕಾರಿಂಜೇಶ್ವರ ದೇವಸ್ಥಾನವು ದ‌.ಕ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಾರಿಂಜ ಎಂಬ ಬೆಟ್ಟದ ಮೇಲಿರುವ ಪುಣ್ಯ ಕ್ಷೇತ್ರ.

ಈ ಶಿವ ದೇವಾಲಯವನ್ನು ಜೈನ ಹಾಗೂ ವೈಷ್ಣವ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ಪಾರ್ವತಿ ದೇವಿಯ ದೇವಾಲಯವನ್ನೂ ಕಾಣಬಹುದು.

ಇಲ್ಲಿಗೆ ಶಿವರಾತ್ರಿಯ ಸಮಯದಲ್ಲಿ ಭೇಟಿ ನೀಡಿ. ಯಾಕೆಂದರೆ ಇಲ್ಲಿ ಅದ್ಧೂರಿಯಾಗಿ ನಡೆಯುವ 4 ದಿನದ ಜಾತ್ರೆಯನ್ನು ಕಣ್ತುಂಬಿಸಿಕೊಳ್ಳಬಹುದು.

ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ.

ಪ್ರಮುಖ ಯುಗಗಳಿಗೆ ಸಾಕ್ಷಿಯಾಗಿರುವ ಈ ಒಂದು ದೇವಾಲಯವನ್ನು ಗಜೇಂದ್ರ ಗಿರಿ, ರೌದ್ರ ಗಿರಿ, ಭೀಮಾ ಶೈಲಾ ಹಾಗೂ ಕಾರಿಂಜ ಎಂದು ಕರೆಯಲಾಗುತ್ತದೆ.

ದ್ವಾಪರಯುಗದಲ್ಲಿ ಭೀಮ ಗಧೆಯನ್ನು ನೆಲದ ಮೇಲೆ ಎಸೆದ್ದಿದ್ದರಿಂದ ಆ ಜಾಗ ಕೊಳವಾಗಿ ರೂಪುಗೊಂಡಿತು. ಅದುವೇ ‘ಗಧಾ ತೀರ್ಥ’ ಕೆರೆ  ಎಂದು ನಂಬಲಾಗಿದೆ.