sachitra

ಮ್ಯಾಚ್ ಫಿಕ್ಸಿಂಗ್ ಆರೋಪ; ಲಂಕಾ ಕ್ರಿಕೆಟಿಗನ ಬಂಧನ..!

06 September 2023

sachitra (1)

ಶ್ರೀಲಂಕಾ ತಂಡದ ಮಾಜಿ ಆಟಗಾರ ಸಚಿತ್ರ ಸೇನಾನಾಯಕೆ ಅವರನ್ನು ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಂಧಿಸಲಾಗಿದೆ.

06 September 2023

sachitra (2)

2020ರ ಲಂಕಾ ಪ್ರಿಮಿಯರ್ ಲೀಗ್ ವೇಳೆ ಇಬ್ಬರು ಆಟಗಾರರಿಗೆ ಮ್ಯಾಚ್ ಫಿಕ್ಸಿಂಗ್ ಆಮಿಷವೊಡ್ಡಿದ ಆರೋಪ ಕೇಳಿಬಂದಿತ್ತು.

06 September 2023

sachitra (4)

ಇದೀಗ ಲಂಕಾದ ಕ್ರೀಡಾ ಸಚಿವಾಲಯದ ತನಿಖಾ ತಂಡ ಸಚಿತ್ರ ಸೇನಾನಾಯಕೆ ಅವರನ್ನು ವಶಕ್ಕೆ ಪಡೆದಿದೆ.

06 September 2023

ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿರುವ ಸಚಿತ್ರ ಸೇನಾನಾಯಕೆಗೆ ಕಳೆದ ತಿಂಗಳು ವಿದೇಶಿ ಪ್ರಯಾಣವನ್ನು ನಿಷೇಧಿಸಲಾಗಿತ್ತು.

06 September 2023

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇನಾನಾಯಕೆ ನನ್ನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಷಡ್ಯಂತ್ರ ಮಾಡಲಾಗುತ್ತಿದೆ ಎಂದಿದ್ದಾರೆ.

06 September 2023

ಸೇನಾನಾಯಕೆ ಲಂಕಾ ಪರ 49 ಏಕದಿನ, 29 ಟಿ20 ಪಂದ್ಯಗಳನ್ನಾಡಿದ್ದು, ಅವರ ವಿರುದ್ಧ ಸಾಕ್ಷ್ಯಧಾರ ಕೂಡ ಸಿಕ್ಕಿದೆ ಎಂದು ವರದಿಯಾಗಿದೆ.

06 September 2023

2008 ರ ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ಸೇನಾನಾಯಕೆ ಆಡಿದ 8 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು.

06 September 2023