ಹೆಸರು ಕೇಳಿದ್ರೇನೇ ಬಾಯಲ್ಲಿ ನೀರೂರುವ ಭಾರತೀಯ ಸ್ಟ್ರೀಟ್ ಫುಡ್ಗಳು

ಸ್ಟ್ರೀಟ್ ಫುಡ್ ಅಂದ್ರೆ ಸಾಕು ಭಾರತೀಯರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ.

ಪಕೋಡ: ಮಳೆಗಾಲಕ್ಕೆ ಹೇಳಿ ಮಾಡಿಸಿದ ತಿಂಡಿಗಳಲ್ಲಿ ಒಂದು. ಪ್ರಮುಖವಾಗಿ ಇರುಳ್ಳಿ ಪಕೋಡ ಹೆಚ್ಚಿನ ಜನಪ್ರಿಯತೆ ಪಡೆದಿದೆ.

ಚೋಲೆ ಬಟುರೆ: ಉತ್ತರ ಭಾರತದಾದ್ಯಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿರುವ ಆಹಾರ.

ಸಮೋಸಾ: ಆಲೂ ಸಮೋಸ, ವೆಜ್‌ಟೇಬಲ್ ಹಾಗೂ ಚಿಕನ್​​​ ಹೀಗೆ ವಿವಿಧ ಬಗೆಯ ಸಮೋಸಗಳನ್ನು ಕಾಣಬಹುದು.

ಪಾನಿ ಪುರಿ: ದೇಶದ ವಿವಿಧ ಭಾಗಗಳಲ್ಲಿ ಬಗೆ ಬಗೆಯ ಹೆಸರುಗಳಿಂದ ಕರೆಯಲ್ಪಡುವ ಭಾರತೀಯ ಸ್ಟ್ರೀಟ್ ಫುಡ್ ಪಾನಿ ಪುರಿ.

ಪಾವ್​​ ಬಾಜಿ: ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆಯಲ್ಲಿ ಫ್ರೈ ಮಾಡಿದ ಪಾವ್‌ಗಳೊಂದಿಗೆ ಬಾಜಿ ಯಾರ ಬಾಯಲ್ಲಿ ನೀರೂರಿಸಬಹುದು.