ಸಮಾಜದಲ್ಲಿ ಹೆಣ್ಣು ಮಗು ಧೈರ್ಯ ಹಾಗೂ ತನ್ನ ಗುರಿಯನ್ನು ಸಾಧಿಸುವಷ್ಟು ಮುಕ್ತವಾಗಿ ಬದುಕಲು ಆಕೆಗೆ ಪ್ರಾರಂಭದಿಂದಲೇ ಪೋಷಕರ ಸಹಕಾರ ಅಗತ್ಯ.

ಆಕೆಯ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ ಹಾಗೂ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿ.

ಆಕೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರೆ, ಹೆಣ್ಣೆಂಬ ಕಾರಣಕ್ಕೆ ಪ್ರೋತ್ಸಾಹಿಸಲು ಹಿಂಜರಿಯದಿರಿ.

ನಿಮ್ಮ ಮಗಳು ಯೌವನಕ್ಕೆ ಬರುವಂತಹ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ಆಕೆಗೆ ತಿಳುವಳಿಕೆ ನೀಡಿ.

ಹೆಣ್ಣಿಂಬ ಕಾರಣಕ್ಕೆ ಆಕೆಯ ಕನಸು ಆಸೆಗಳನ್ನು ಮಿತಿಯಲ್ಲಿಡಲು ಪ್ರಯತ್ನಿಸಬೇಡಿ.

ಪ್ರತಿದಿನ ಒಂದಷ್ಟು ಹೊತ್ತು ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಮರೆಯದಿರಿ.

ಯಾವತ್ತಿಗೂ ಇನ್ನೊಬ್ಬರೊಂದಿಗೆ ತನ್ನನ್ನು ಹೋಲಿಸುವ ಅಭ್ಯಾಸ ಬರದಂತೆ ನಿಮ್ಮ ಮಗಳನ್ನು ಬೆಳೆಸಿ.