ಸಕ್ಕರೆಯ ಕಡು ಬಯಕೆಯಿಂದ ದೂರವಿರಲು ಇಲ್ಲಿದೆ ಸಿಂಪಲ್ ಟಿಪ್ಸ್

ರಕ್ತದಲ್ಲಿನ ಗುಕ್ಲೋಸ್ ಮಟ್ಟದಲ್ಲಿ ಅಸಮತೋಲನ ಉಂಟಾದಾಗ ಹೆಚ್ಚು ಸಿಹಿಯನ್ನು ತಿನ್ನುವ ಬಯಕೆ ಉಂಟಾಗುತ್ತದೆ. 

ಹೆಚ್ಚು ಸಕ್ಕರೆಯನ್ನು ಹಂಬಲಿಸುವವರಲ್ಲಿ ನೀವು ಒಬ್ಬರಾಗಿದ್ದರೆ, ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್.

ಡಾರ್ಕ್ ಚಾಕೋಲೇಟ್:  ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರ ಜೊತೆಗೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಬೆರ್ರಿ ಹಣ್ಣುಗಳು: ಇದರಲ್ಲಿ ಫೈಬರ್ ಮತ್ತು ಉತ್ಕರ್ಷಣಾ ನಿರೋಧಕಗಳು ಸಮೃದ್ಧವಾಗಿದ್ದು, ಸಕ್ಕರೆಯ ಕಡು ಬಯಕೆಯಿಂದ ದೂರವಿರಲು ಸಹಾಯ ಮಾಡುತ್ತದೆ. 

ಅವಕಾಡೋ: ಇದರಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಫೈಬರ್ ಹೇರಳವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಡ್ರೈ ಫ್ರೂಟ್ಸ್: ಇವುಗಳು ಪ್ರೋಟೀನ್ , ಆರೋಗ್ಯಕರ ಕೊಬ್ಬು ಮತ್ತು  ಫೈಬರ್ನ ಉತ್ತಮ ಮೂಲವಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.