ಬೇಸಿಗೆಯಲ್ಲಿ ಪ್ರತೀ ದಿನ ಬಿಯರ್ ಕುಡಿಯುವುದು ಎಷ್ಟು ಸೂಕ್ತ?

ಯಾವುದೇ ಪಾರ್ಟಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಬಿಯರ್​ ಕುಡಿಯುವುದು ಸಾಮಾನ್ಯ.

ಬೇಸಿಗೆಯಲ್ಲಿ ಪ್ರತೀ ದಿನ ಬಿಯರ್​​ ಕುಡಿಯುವುದರಿಂದ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ.

ನಿಯಮಿತವಾಗಿ ಬಿಯರ್​​ ಕುಡಿಯುವ ವ್ಯಕ್ತಿಗಳು ಹೆಚ್ಚು ಕಾಲ ಬದುಕುತ್ತಾರೆ ಎಂದು ಸಂಶೋಧನೆಗಳು ತಿಳಿಸಿವೆ.

ಸಾಕಷ್ಟು ಜನರು ಬೇಸಿಗೆಯ ಸುಡುಬಿಸಿಲಿನಿಂದ ದೇಹವನ್ನು ತಂಪಾಗಿರಿಸಲು ಬಿಯರ್​​​ ಕುಡಿಯುತ್ತಾರೆ.

ಆದರೆ ಸಾಮಾನ್ಯವಾಗಿ ನೀವು ಕುಡಿಯುವ ಒಂದು ಗ್ಲಾಸ್​​​​ ಬಿಯರ್​​ನಲ್ಲಿ 150 ಕ್ಯಾಲೋರಿಗಳನ್ನು ಹೊಂದಿರುತ್ತದೆ.

ನೀವು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಸಲು ದಿನಾ ಬಿಯರ್​​ ಕುಡಿಯುತ್ತಿದ್ದರೆ, ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಇತರ ಆಲ್ಕೋಹಾಲ್ ಯುಕ್ತ ಪಾನೀಯಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ  ಹಾನಿಕಾರಕ ಎಂದು ಪರಿಗಣಿಸಲಾಗಿದೆ.

ನಿಯಮಿತವಾಗಿ ಬಿಯರ್​​ ಕುಡಿಯುವುದರಿಂದ  ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.