ಬೇಸಿಗೆ ಪ್ರಾರಂಭವಾಗಿದೆ. ಆದ್ದರಿಂದ ಈ ಬಿಸಿಲಿನ ಬೇಗೆಗೆ ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡಿ.

ಬೇಸಿಗೆಯಲ್ಲಿ ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. ಯಾಕೆಂದರೆ ಬಿಸಿಲಿನ ಶಾಖ ಮೈಗೆ ಹೆಚ್ಚು ತಾಗುವುದಿಲ್ಲ.

ಗಾಢ ಬಣ್ಣದ ಬಟ್ಟೆಯನ್ನು ನೀವು ಬೇಸಿಗೆಯಲ್ಲಿ ಧರಿಸುವುದರಿಂದ ಸೂರ್ಯನ ಕಿರಣಗಳನ್ನು ನೇರವಾಗಿ ಹೀರಿಕೊಳ್ಳುತ್ತವೆ.

ಬೇಸಿಗೆಯಲ್ಲೂ ನಿಮ್ಮನ್ನು ತಂಪಾಗಿರಿಸಲು ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಕಾಟನ್ ಬಟ್ಟೆಗಳನ್ನು ಆಯ್ಕೆ ಮಾಡಿ.

ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವುದಕ್ಕೆ ಪೂರಕವಾಗುವಂತೆ ಖಾದಿ ಬಟ್ಟೆಗಳನ್ನು ಬೇಸಿಗೆಯಲ್ಲಿ ಆಯ್ದುಕೊಳ್ಳಿ.

ಬೇಸಿಗೆಯಲ್ಲಿ ಮೈ ಬೆವರುವುದರಿಂದ ಕೊಂಚ ಸಡಿಲವಾದ ಉಡುಪುಗಳನ್ನು ಧರಿಸುವುದು ಸಾಕಷ್ಟು ಆರಾಮದಾಯಕವಾಗಿರುತ್ತದೆ.

ಕುತ್ತಿಗೆ, ಕೈಗಳನ್ನು ಸಂಪೂರ್ಣವಾಗಿ ಮುಚ್ಚುವ ಹತ್ತಿ ಬಟ್ಟೆ ಬಳಸಿ. ಇದರಿಂದ ಸೂರ್ಯನ ಶಾಖಕ್ಕೆ ಚರ್ಮ ಸುಡುವುದನ್ನು ತಪ್ಪಿಸಬಹುದು.