11 August 2023

ಹಿರಿಯ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ

11 August 2023

ಟಾಲಿವುಡ್ ಹಿರಿಯ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈ ಕೋರ್ಟ್ ಶಾಕ್ ನೀಡಿದೆ.

11 August 2023

ಆರು ತಿಂಗಳ ಜೈಲು ಶಿಕ್ಷೆ ವಿಧಿಸುವುದಾಗಿ ನ್ಯಾಯಾಲಯ ಶುಕ್ರವಾರ (ಆ.11) ತೀರ್ಪು ಪ್ರಕಟಿಸಿದೆ.

11 August 2023

80 ರ ದಶಕದಲ್ಲಿ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟಾಪ್ ನಟರೊಂದಿಗೆ ನಟಿಸಿದ್ದ ಜಯಪ್ರದಾ.

11 August 2023

ಇದಲ್ಲದೇ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಸಂಸದರಾಗಿ ಗೆದ್ದು 2004 ರಿಂದ 2014 ರವರೆಗೆ ಆಡಳಿತ ನಡೆಸಿದ್ದರು.

11 August 2023

ಆದರೆ ಇದೀಗಾ ನಟಿಗೆ ಚೆನ್ನೈನ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಾಕ್​​ ನೀಡಿದೆ.

11 August 2023

ಚೆನ್ನೈನ ರಾಮ್ ಕುಮಾರ್ ಮತ್ತು ರಾಜಬಾಬು ಅವರೊಂದಿಗೆ ‘ಜಯಪ್ರದಾ ಥಿಯೇಟರ್ ಕಾಂಪ್ಲೆಕ್ಸ್’ ನಡೆಸುತ್ತಿರುವ ನಟಿ.

11 August 2023

ಜಯಪ್ರದಾ ಅವರು ನಡೆಸುತ್ತಿದ್ದ ಚಿತ್ರಮಂದಿರದ ಕೆಲಸಗಾರರಿಗೆ ಸೂಕ್ತ ಇಎಸ್​ಐ (ESI) ಹಣ ನೀಡಿಲ್ಲ ಎಂದು ಕೇಸ್ ದಾಖಲಾಗಿತ್ತು.

11 August 2023

ಹೀಗಾಗಿ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ತಮಿಳುನಾಡಿನ ಎಗ್ಮೋರ್ ನ್ಯಾಯಾಲಯ ಬಹಿರಂಗಪಡಿಸಿದೆ.

11 August 2023

ಈ ಹಿಂದೆ ಕೂಡ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಚಿತ್ರಮಂದಿರದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.