ವಿಶ್ವದ ಮೊದಲ ಐಫೋನ್ ಮತ್ತೆ ಮಾರಾಟ: ಕೋಟಿ ಮೊತ್ತಕ್ಕೆ ಹರಾಜು ಸಾಧ್ಯತೆ

15-March-2024

Author: Vinay Bhat

ವಿಶ್ವದ ಮೊದಲ ಐಫೋನ್ ಅನ್ನು 2007 ರಲ್ಲಿ ಬಿಡುಗಡೆ ಮಾಡಲಾಯಿತು. ಆ್ಯಪಲ್'ನ ಮಾಜಿ ಸಿಇಒ ಸ್ಟೀವ್ ಜಾಬ್ಸ್ ಇದನ್ನು ಅಮೆರಿಕಾದಲ್ಲಿ ಪರಿಚಯಿಸಿದರು.

ಮೊದಲ ಐಫೋನ್

ಐಫೋನ್‌ನ ಬಿಡುಗಡೆಯೊಂದಿಗೆ ಆ್ಯಪಲ್ ಕಂಪನಿ ಜಗತ್ತಿಗೆ ಶಕ್ತಿಯುತ ಮೊಬೈಲ್ ಪರಿಚಯಿಸಿತು. ಆ ಸಮಯದಲ್ಲಿ ಐಫೋನ್ 4GB/8GB ಸಂಗ್ರಹದೊಂದಿಗೆ ಬಿಡುಗಡೆ ಆಗಿತ್ತು.

ಸ್ಟೋರೇಜ್

2007 ರ ಮಾದರಿಯ ಐಫೋನ್ (4GB) ಇದೀಗ ಪುನಃ ಮಾರಾಟವಾಗುತ್ತಿದೆ. LCG ಹರಾಜು ಕಂಪನಿ ಈ ಫೋನನ್ನು ಹರಾಜು ಮಾಡುತ್ತಿದೆ.

ಐಫೋನ್ ಹರಾಜು

ವಿಶೇಷ ಎಂದರೆ, ಈ ಮೊದಲ ಐಫೋನಿನ ಪ್ಯಾಕಿಂಗ್ ಅನ್ನು ಇಲ್ಲಿಯವರೆಗೆ ತೆರೆಯಲಾಗಿಲ್ಲ. ಅಂದರೆ ಈ ಐಫೋನ್ ಅನ್ನು ಇದುವರೆಗೆ ಆನ್ ಕೂಡ ಮಾಡಿಲ್ಲ.

ಪ್ಯಾಕಿಂಗ್

2023 ರಲ್ಲಿ ಕೂಡ, LCG 2007 ಮಾದರಿಯ ಐಫೋನ್ (4GB) ಅನ್ನು ಹರಾಜು ಮಾಡಿತ್ತು, ಆಗ ಅದು 1.5 ಕೋಟಿ ರೂ. ಗೆ ಹರಾಜಾಯಿತು.

ಕೋಟಿಗೆ ಮಾರಾಟ

ಈ ಬಾರಿಯ 10,000 ಡಾಲರ್ ಅಂದರೆ ಸರಿಸುಮಾರು 8.20 ಲಕ್ಷಕ್ಕೆ ಐಫೋನ್ ಹರಾಜು ಆರಂಭವಾಗಿದ್ದು, 1.5 ಕೋಟಿ ರೂ. ಗಳ ಹರಾಜಿನ ದಾಖಲೆ ಮುರಿಯುವ ಸಾಧ್ಯತೆ ಇದೆ.

ದಾಖಲೆ ಮುರಿಯುತ್ತಾ?

ವಿಶ್ವದ ಮೊದಲ ಐಫೋನ್ 3.5 ಇಂಚಿನ ಟಚ್‌ಸ್ಕ್ರೀನ್, 2 ಎಂಪಿ ಕ್ಯಾಮೆರಾ, ವೆಬ್ ಬ್ರೌಸರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿತ್ತು, 4 ಜಿಬಿ ಮಾಡೆಲ್‌ ಬಹಳ ಕಡಿಮೆ ಸಂಖ್ಯೆಯಲ್ಲಿ ನೀಡಿದೆಯಷ್ಟೆ.

ಐಫೋನ್ ಫೀಚರ್ಸ್