21-03-2024

ನಿಮ್ಮ ಮೊಬೈಲ್​ನಲ್ಲಿ ನೆಟ್​ವರ್ಕ್ ಪ್ರಾಬ್ಲಂ ಇದೆಯೇ?: ಜಸ್ಟ್ ಹೀಗೆ ಮಾಡಿ

Author: Vinay Bhat

ಫೋನ್ ನೆಟ್‌ವರ್ಕ್‌

ನಿಮ್ಮ ಫೋನ್ ಅನ್ನು ರಿ-ಸ್ಟಾರ್ಟ್ ಮಾಡಿ. ಫೋನ್‌ -ಸ್ಟಾರ್ಟ್ ಮಾಡುವುದರಿಂದ ಅದು ರಿಫ್ರೆಶ್ ಆಗುತ್ತದೆ ಮತ್ತು ಫುಲ್ ನೆಟ್‌ವರ್ಕ್ ಬರುತ್ತದೆ.

ಸೆಟ್ಟಿಂಗ್ಸ್

ರಿ-ಸ್ಟಾರ್ಟ್ ಮಾಡಿದರೂ ಸರಿಯಾಗಿದಿದ್ದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ನ ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬೇಕು.

ನೆಟ್ವರ್ಕ್ ಆಪರೇಟರ್

ನಿಮ್ಮ ಫೋನಿನಲ್ಲಿ ನೀವು ಸರಿಯಾದ ನೆಟ್‌ವರ್ಕ್ ಆಪರೇಟರ್ ಅನ್ನು ಆಯ್ಕೆಮಾಡಿದ್ದೀರಿಯೇ ಎಂದು ಖಚಿತಪಡಿಸಿಕೊಳ್ಳಿ.

5G, 4G ನೆಟ್‌ವರ್ಕ್

ನೀವು ನೆಟ್ವರ್ಕ್ ಮೋಡ್ ಅನ್ನು ಬದಲಾಯಿಸಬಹುದು. ಉದಾಹರಣೆಗೆ, ನೀವು ಪ್ರಸ್ತುತ 5ಜಿಯಲ್ಲಿದ್ದರೆ ನೀವು 4G, 3G ಅಥವಾ 2G ಗೆ ಬದಲಾಯಿಸಬಹುದು.

ಮೊಬೈಲ್ ಸಿಮ್

ನಿಮ್ಮ ಸಿಮ್ ಕಾರ್ಡ್ ಪರಿಶೀಲಿಸಿ. ಸಿಮ್ ಹಾನಿಗೊಳಗಾಗಿದ್ದರೆ ಅದನ್ನು ಸರಿಪಡಿಸಿ, ಇಲ್ಲವಾದಲ್ಲಿ ನೆಟ್‌ವರ್ಕ್ ಸಂಪರ್ಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಫೋನ್ ಕವರ್

ನಿಮ್ಮ ಫೋನ್‌ನ ಕವರ್ ತೆಗೆದುಹಾಕಿ. ಕೆಲವು ಕವರ್‌ಗಳು ಸಿಗ್ನಲ್ ಅನ್ನು ನಿರ್ಬಂಧಿಸುತ್ತದೆ.

ನೆಟ್‌ವರ್ಕ್ ಸಮಸ್ಯೆ

ನಿಮ್ಮ ಫೋನ್ ಅನ್ನು ಓಪನ್ ಪ್ಲೇಸ್'ನಲ್ಲಿ ಇಡಿ. ಗೋಡೆಗಳು, ಕಬ್ಬಿಣ ಮತ್ತು ಇತರ ವಸ್ತುಗಳು ಸಿಗ್ನಲ್ ಅನ್ನು ನಿರ್ಬಂಧಿಸಬಹುದು.