10-11-2023
ಯೂಟ್ಯೂಬ್ ಸಬ್ಸ್ಕ್ರೈಬರ್ಸ್ ಹೆಚ್ಚಿಸುವುದು ಹೇಗೆ?
ಯೂಟ್ಯೂಬ್'ಗೆ ಬೇಡಿಕೆ
ಭಾರತದಲ್ಲಿ ಯೂಟ್ಯೂಬ್ ಜನಪ್ರಿಯತೆ ಗಮನಾರ್ಹ ಏರಿಕೆ ಕಂಡಿವೆ. ನಿಮ್ಮ ಕೌಶಲ್ಯದಿಂದ ಮನೆಯಲ್ಲೇ ಕುಳಿತು ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ.
ಯೂಟ್ಯೂಬ್ ಚಾನೆಲ್
ಇಂದು ಯೂಟ್ಯೂಬ್ ಚಾನೆಲ್ಗಳ ಸಂಖ್ಯೆ ಕೂಡ ಲೆಕ್ಕಕ್ಕೆ ಸಿಗದಷ್ಟಿದೆ. ಆದರೆ, ಯೂಟ್ಯೂಬ್ ಖಾತೆ ತೆರೆದು ಕೇವಲ ವಿಡಿಯೋ ಹಂಚಿಕೊಳ್ಳುತ್ತಿದ್ದರೆ ಸಾಲದು.
ಸಬ್ಸ್ಕ್ರೈಬರ್ಸ್ ಮುಖ್ಯ
ಯೂಟ್ಯೂಬ್ನಲ್ಲಿ ಚಂದಾದಾರರನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಹಾಗಾದರೆ, ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ?.
ವಿಡಿಯೋ ಅಪ್ಡೇಟ್
ಯೂಟ್ಯೂಬ್ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು.
3 ವಿಡಿಯೋ
ಯೂಟ್ಯೂಬ್ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು. ವಾರದಲ್ಲಿ ಕನಿಷ್ಠ 3 ವಿಡಿಯೋ ಅಪ್‌ಲೋಡ್ ಮಾಡಲೇಬೇಕು.
ಗುಣಮಟ್ಟ
ವಿಡಿಯೋವನ್ನು ಪೋಸ್ಟ್ ಮಾಡಿದಾಗ ಅದರ ಗುಣಮಟ್ಟಕ್ಕೆ ವಿಶೇಷ ಗಮನ ನೀಡಿ. ಅದು ನಿಮ್ಮ ಚಾನಲ್ ಅನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಹಾಗಾಯೆ ಹೈ ಕ್ವಾಲಿಟಿಯಲ್ಲಿ ಹಂಚಿಕೊಳ್ಳಿ.
ಶೇರ್ ಮಾಡುವುದು ಮುಖ್ಯ
ನೀವು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ ವಿಡಿಯೋವನ್ನು ಶೇರ್ ಮಾಡಬೇಕು. ನೀವು ಎಷ್ಟು ಜನರಿಗೆ ಹತ್ತಿರವಾಗುತ್ತೀರೊ ಅಷ್ಟು ಚಂದಾದಾರರನ್ನು ಪಡೆಯುತ್ತೀರಿ.
ಭಿನ್ನವಾಗಿರಲಿ
ಉದಾಹರಣೆಗೆ ನಿಮ್ಮ ಯೂಟ್ಯೂಬ್ ಚಾನಲ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ರಚಿಸಿದ್ದರೆ, ನೀವು ಅಧ್ಯಯನ ಮಾಡಬೇಕು. ಅಲ್ಲದೆ ಇತರರಿಗಿಂತ ಭಿನ್ನವಾದ ಮಾಹಿತಿ ನೀಡಬೇಕು.
BSNL ಬಳಕೆದಾರರಿಗೆ ದೀಪಾವಳಿ ಆಫರ್: ಡೇಟಾ ಫ್ರೀ.. ಫ್ರೀ..
ಇನ್ನಷ್ಟು ಓದಿ