30-09-2023

ಪ್ರಪಂಚದಲ್ಲಿ ಸಖತ್ ಟ್ರೆಂಡಿಂಗ್​ನಲ್ಲಿರುವ ಫೋನ್‌ಗಳು ಯಾವುವು ನೋಡಿ

ಐಫೋನ್ 14 ಪ್ರೊ ಮ್ಯಾಕ್ಸ್

ಐಫೋನ್ 14 ಪ್ರೊ ಮ್ಯಾಕ್ಸ್ ಈ ವರ್ಷದ ಮೊದಲಾರ್ಧದಲ್ಲಿ ವಿಶ್ವದಾದ್ಯಂತ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಆಗಿದೆ. ಆ್ಯಪಲ್ ಒಟ್ಟು 26.5 ಮಿಲಿಯನ್ ಯುನಿಟ್‌ಗಳನ್ನು ಸೇಲ್ ಮಾಡಿದೆ.

ಐಫೋನ್ 14 ಪ್ರೊ

ಎರಡನೇ ಸ್ಥಾನವನ್ನು ಆ್ಯಪಲ್ ಐಫೋನ್ 14 ಪ್ರೊ ಫೋನಿದೆ. ಇದು 14 ಸರಣಿಯಲ್ಲಿ ಅತಿ ಹೆಚ್ಚು ಸೇಲ್ ಆದ ಎರಡನೇ ಫೋನಾಗಿದೆ.

ಐಫೋನ್ 14

ಮೂರನೇ ಸ್ಥಾನದಲ್ಲಿ ಐಫೋನ್ 14 ಇದೆ. ಇದುಕೂಡ 14 ಸರಣಿಯ ಭಾಗವಾಗಿದ್ದು, ದಾಖಲೆಯ ಮಾರಾಟ ಕಂಡಿದೆಯಂತೆ.

ಐಫೋನ್ 13

2023 ರಲ್ಲಿ 15.5 ಮಿಲಿಯನ್ ಯುನಿಟ್‌ಗಳನ್ನು ಸೇಲ್ ಮಾಡುವುದರ ಮೂಲಕ ಐಫೋನ್ 13 ವಿಶ್ವದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ  ನಾಲ್ಕನೇ ಸ್ಮಾರ್ಟ್‌ಫೋನ್ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A14

ಸ್ಯಾಮ್‌ಸಂಗ್ ಗ್ಯಾಲಕ್ಸಿ A15 ಫೋನ್ 12.4 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.

ಗ್ಯಾಲಕ್ಸಿ S23 ಆಲ್ಟ್ರಾ

2023ರ ಮೊದಲಾರ್ಧದಲ್ಲಿ ಜಾಗತಿಕವಾಗಿ ಈ ಫೋನ್ 9.6 ಮಿಲಿಯನ್ ಯುನಿಟ್‌ ಮಾರಾಟ ಮಾಡಿದೆ. ಗ್ಯಾಲಕ್ಸಿ S23 ಆಲ್ಟ್ರಾ ಹೆಚ್ಚು ರವಾನೆಯಾದ ಆರನೇ ಸ್ಮಾರ್ಟ್‌ಫೋನ್ ಆಗಿದೆ.

ಗ್ಯಾಲಕ್ಸಿ A14 5G

ನಂ. 7 ರಲ್ಲಿ ಕೂಡ ಸ್ಯಾಮ್‌ಸಂಗ್ ಫೋನ್ ಇದೆ. ಗ್ಯಾಲಕ್ಸಿ A14 5G 9.0 ಮಿಲಿಯನ್ ಯುನಿಟ್‌ಗಳನ್ನು ಸೇಲ್ ಮಾಡಿದೆಯಂತೆ.

ಗ್ಯಾಲಕ್ಸಿ A14 5G, A54 5G

ಗ್ಯಾಲಕ್ಸಿ A14 5G, A54 5G ಫೋನ್ ಎಂಟನೇ ಸ್ಥಾನದಲ್ಲಿದೆ, 2023 ರ ಮೊದಲ ಆರು ತಿಂಗಳಲ್ಲಿ ಇದು 8.8 ಮಿಲಿಯನ್ ಫೋನುಗಳನ್ನು ಮಾರಾಟ ಮಾಡಿದೆ.

ಗ್ಯಾಲಕ್ಸಿ A14 5G-A34 5G

ಗ್ಯಾಲಕ್ಸಿ A14 5G ಮತ್ತು A34 ಹೆಚ್ಚು ರವಾನೆಯಾದ ಒಂಬತ್ತನೇ ಸ್ಮಾರ್ಟ್‌ಫೋನ್ ಆಗಿದ್ದು, 2023 ರ ಮೊದಲಾರ್ಧದಲ್ಲಿ 7.1 ಮಿಲಿಯನ್ ಯುನಿಟ್‌ಗಳನ್ನು ಸೇಲ್ ಮಾಡಿದೆ.