ಐಫೋನ್​ನಲ್ಲಿ ಚಾರ್ಜ್ ಹೆಚ್ಚು ಸಮಯ ಬರಲು ಏನು ಮಾಡಬೇಕು?

30-December-2023

ಇಂದಿನ ದಿನಗಳಲ್ಲಿ ನಮ್ಮ ಹೆಚ್ಚಿನ ಕೆಲಸಗಳು ಫೋನ್‌ ಮೂಲಕವೇ ನಡೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಟರಿ ಬೇಗನೆ ಖಾಲಿಯಾದರೆ ಸಮಸ್ಯೆ ಆಗುತ್ತದೆ.

ಬ್ಯಾಟರಿ

ನೀವು ಆ್ಯಪಲ್ ಐಫೋನ್ ಅನ್ನು ಬಳಸುತ್ತಿದ್ದರೆ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಲು ಈ 3 ಸೆಟ್ಟಿಂಗ್‌ಗಳನ್ನು ಗಮನಿಸಿ.

ಬ್ಯಾಟರಿ ಬಾಳಿಕೆ

ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುವುದರ ಹಿಂದೆ ಒಂದಲ್ಲ ಹಲವು ಕಾರಣಗಳಿರಬಹುದು, ಆದರೆ ಸೆಟ್ಟಿಂಗ್‌ಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಬ್ಯಾಟರಿ ಬಾಳಿಕೆ ಹೆಚ್ಚಿಸಬಹುದು.

ಸೆಟ್ಟಿಂಗ್ಸ್

ಫುಲ್ ಬ್ರೈಟ್'ನೆಸ್'ನಿಂದ ಬ್ಯಾಟರಿಯು ವೇಗವಾಗಿ ಬರಿದಾಗಲು ಪ್ರಾರಂಭಿಸುತ್ತದೆ. ಹೀಗಾಗಿ ಡಿಸ್'ಪ್ಲೇ ಬ್ರೈಟ್'ನೆಸ್ ಅಟೋಮೆಟಿಕ್ ಇಡಿ.

ಬ್ರೈಟ್'ನೆಸ್

ಬ್ಯಾಟರಿ ಖಾಲಿಯಾಗಲು ಮತ್ತೊಂದು ಕಾರಣ ಬ್ಯಾಕ್'ಗ್ರೌಂಡ್ ಅಪ್ಲಿಕೇಶನ್‌ಗಳು. ಅವು ಅಪ್‌ಡೇಟ್ ಆಗುತ್ತಲೇ ಇರುತ್ತವೆ. ಇದು ಹೆಚ್ಚು ಚಾರ್ಜ್ ಖಾಲಿ ಮಾಡುತ್ತದೆ.

ಅಪ್ಲಿಕೇಶನ್‌ಗಳು

ನೀವು ಸೆಟ್ಟಿಂಗ್ಸ್ ನಲ್ಲಿ ಅಪ್ಲಿಕೇಶನ್‌ನ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಬ್ಯಾಕ್'ಗ್ರೌಂಡ್ ರಿಫ್ರೆಶ್ ಅನ್ನು ಆಫ್ ಮಾಡಬಹುದು.

ಹೀಗೆ ಮಾಡಿ

ಸೆಟ್ಟಿಂಗ್‌ಗಳಿಗೆ ಹೋಗಿ ಲೊಕೇಷನ್ ಆನ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ಈ ಆಯ್ಕೆ ಆನ್ ಇದ್ದರೆ ಬ್ಯಾಟರಿ ಬೇಗನೆ ಖಾಲಿ ಆಗುತ್ತದೆ. ಇದನ್ನು ಆಫ್ ಮಾಡುವುದು ಒಳ್ಳೆಯದು.

ಲೊಕೇಷನ್