ಕಾರ್ಡ್ ಇಲ್ಲದೆ ATMನಿಂದ ಹಣ ತೆಗೆಯುವುದು ಹೇಗೆ?: ಇಲ್ಲಿದೆ ಟ್ರಿಕ್

15-January-2024

Author: Vinay Bhat

ನಿಮಗೆ ತುರ್ತು ಕ್ಯಾಶ್'ನ ಅಗತ್ಯವಿದ್ದರೆ, ಆದರೆ ನೀವು ಡೆಬಿಟ್ ಅಥವಾ ಎಟಿಎಂ ಕಾರ್ಡ್ ಹೊಂದಿಲ್ಲದಿದ್ದರೆ, ಎಟಿಎಂನಿಂದ ಯುಪಿಐ ಮೂಲಕ ಹಣವನ್ನು ಪಡೆಯಬಹುದು.

ಕಾರ್ಡ್ ಇಲ್ಲಿದೆ ಹಣ

ಯುಪಿಐ ಮೂಲಕ ಎಟಿಎಂನಿಂದ ಹಣವನ್ನು ಹಿಂಪಡೆಯಲು, ಮೂರು ವಿಷಯಗಳು ಅಗತ್ಯವಿರುತ್ತದೆ. ಫೋನ್- ಯುಪಿಐ ಅಪ್ಲಿಕೇಶನ್ ಮತ್ತು ಇಂಟರ್ನೆಟ್.

3 ವಿಷಯ

ನೀವು ಪೇಟಿಂ, ಫೋನ್ ಪೇ, ಗೂಗಲ್ ಪೇ ಅಥವಾ ಭೀಮ್ ನಂತಹ ಯಾವುದೇ UPI ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬಹುದು.

UPI ಆ್ಯಪ್

ATM ನ ಡಿಸ್'ಪ್ಲೇ ಮೇಲೆ UPI ಕಾರ್ಡ್‌ಲೆಸ್ ಕ್ಯಾಶ್ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ನಂತರ ನಿಮಗೆ ಅಗತ್ಯವಿರುವ ಮೊತ್ತವನ್ನು ನಮೂದಿಸಿ.

ಹಂತ 1

ಮೊತ್ತವನ್ನು ನಮೂದಿಸಿದ ನಂತರ, ನೀವು UPI ಅಪ್ಲಿಕೇಶನ್ ಹೊಂದಿರುವ ಫೋನ್ ಅನ್ನು ಹೊರತೆಗೆಯಿರಿ, ಡಿಸ್ ಪ್ಲೇ ಮೇಲೆ ಗೋಚರಿಸುವ QR ಕೋಡ್ ಸ್ಕ್ಯಾನ್ ಮಾಡಿ.

ಹಂತ 2

QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಹಣವನ್ನು ಹಿಂಪಡೆಯಲು UPI ಪಿನ್ ಅನ್ನು ನಮೂದಿಸಬೇಕು. ನಂತರ ನಗದು ಬರುತ್ತದೆ.

ಹಂತ 3

UPI ಗೆ ನೋಂದಾಯಿಸಿದ ಜನರು ಮಾತ್ರ UPI ಮೂಲಕ ATM ನಿಂದ ಹಣವನ್ನು ಪಡೆಯಬಹುದು. ಹಾಗೆಯೆ ಈ ಸೌಲಭ್ಯ ಸದ್ಯಕ್ಕೆ ಕೆಲ ಕಡೆಗಳಲ್ಲಿ ಮಾತ್ರ ಲಭ್ಯವಿದೆ.

ಗಮನಿಸಿ