ಬರುತ್ತಿದೆ ಜಿಯೋದ ಹೊಸ ಫೋನ್: ಹೇಗಿದೆ?, ಬೆಲೆ ಎಷ್ಟು?

18 February 2024

Author: Vinay Bhat

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಜಿಯೋದಿಂದ ಮತ್ತೊಂದು ಅಗ್ಗದ ಫೋನ್ ಶೀಘ್ರದಲ್ಲೇ ಪ್ರವೇಶಿಸಲಿದೆ. ಇದನ್ನು ಬಿಐಎಸ್ ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ.

ಜಿಯೋ ಫೋನ್

ತಜ್ಞರ ಪ್ರಕಾರ, ರಿಲಯನ್ಸ್ ಜಿಯೋದ ಈ ಮುಂದಿನ ಫೋನ್ ಜಿಯೋ ಭಾರತ್ B2 ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದು ಅಧಿಕೃತವಲ್ಲ.

ಜಿಯೋ ಭಾರತ್ B2

ಜಿಯೋದ ಮುಂಬವರುವ ಹೊಸ ಫೋನಿನ ಬೆಲೆ ತುಂಬಾ ಕಡಿಮೆ ಇರಲಿದೆಯಂತೆ. ಇದೊಂದು ಕಂಪನಿಯ ಅಗ್ಗದ ಫೋನ್ ಆಗಿರಲಿದೆ ಎನ್ನಲಾಗಿದೆ.

ಅಗ್ಗದ ಫೋನ್

ಜಿಯೋ ಭಾರತ್ B2 ಫೋನ್ ಎನ್ನಲಾಗಿರುವ ಇದನ್ನು BIS ಅಂದರೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ.

BIS

ಜಿಯೋ ಸೆಪ್ಟೆಂಬರ್​ನಲ್ಲಿ ಈ ಫೋನಿನ ಹಿಂದಿನ ವರ್ಷನ್ ಜಿಯೋ ಭಾರತ್ B1 ಅನ್ನು ಬಿಡುಗಡೆ ಮಾಡಿತ್ತು. ಸದ್ಯ B2 ಫೋನ್ ಬೆಲೆ 1,299 ರೂ. ಇರಬಹುದು ಎನ್ನಲಾಗಿದೆ.

ಹಿಂದಿನ ಆವೃತ್ತಿ

4G ಸಂಪರ್ಕದೊಂದಿಗೆ ಜಿಯೋ ಭಾರತ್ B2 ಫೋನ್ ಬಿಡುಗಡೆ ಮಾಡಲಾಗುತ್ತಿದೆ. ಈ ಫೋನ್‌ನಲ್ಲಿ UPI ಪಾವತಿ ವೈಶಿಷ್ಟ್ಯವನ್ನು ಒದಗಿಸಲಾಗಿದೆಯಂತೆ.

4G ಸಂಪರ್ಕ

ಜಿಯೋದ ಹೊಸ ಫೋನನ್ನುBIS ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವ ಕಾರಣ ಕೆಲವೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಯಾವಾಗ ರಿಲೀಸ್?