ಇದೀಗ ಫೋನ್ ಖರೀದಿಸಲು ನೋಕಿಯಾ ಸಾಲ ಕೊಡುತ್ತೆ

28 October 2023

ಪ್ರಸಿದ್ಧ ನೋಕಿಯಾ ಫೋನ್ ಕಂಪನಿಯು ಬಜೆಟ್ ಫೋನ್‌ಗಳನ್ನು ಹುಡುಕುತ್ತಿರುವವರಿಗೆ ಸಾಲ ಯೋಜನೆಯನ್ನು ಪ್ರಾರಂಭಿಸಿದೆ.

ಫೋನ್'ಗೆ ಸಾಲ

ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಎಚ್‌ಎಂಡಿ ಗ್ಲೋಬಲ್‌ನ ಈಸಿ ಪೇ ಸೇವೆಯ ಮೂಲಕ ಸಾಲ ಪಡೆದು ಖರೀದಿಸಬಹುದು.

HMD ಸುಲಭ ಪಾವತಿ

ಈ ಹಣಕಾಸು ಸೇವೆಯ ಮೂಲಕ, ಬಡ್ಡಿಯನ್ನು ಪಾವತಿಸದೆಯೇ EMI ಆಯ್ಕೆಯು ಲಭ್ಯವಿರುತ್ತದೆ.

ಬಡ್ಡಿ ಇಲ್ಲ

ಬಳಕೆದಾರರಿಗೆ ಸಾಲವನ್ನು ಮರುಪಾವತಿಸಲು ಕಾಲವಕಾಶ ಕೂಡ ನೀಡಲಾಗಿದೆ. ನೀವು 8 ತಿಂಗಳವರೆಗೆ ಸಮಯವನ್ನು ಪಡೆಯಬಹುದು.

ಕಾಲವಕಾಶ

ಈ ಸೌಲಭ್ಯವು ನೋಕಿಯಾ ಫೋನ್‌ಗಳಿಗೆ ಮಾತ್ರ. ಮತ್ತು HMD ಈಸಿ ಪೇ ಅನ್ನು ಬಳಸುವುದಕ್ಕಾಗಿ ನಿಮಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಹೆಚ್ಚುವರಿ ಶುಲ್ಕವಿಲ್ಲ

ಈಸಿ ಪೇ ಅಪ್ಲಿಕೇಶನ್‌ನ ಸಹಾಯದಿಂದ, ನೀವು ಕೇವಲ 2 ಗಂಟೆಗಳಲ್ಲಿ ತ್ವರಿತ ಸಾಲವನ್ನು ಪಡೆಯುತ್ತೀರಿ.

2 ಗಂಟೆಗಳಲ್ಲಿ ಸಾಲ

ನೋಕಿಯಾ G42, C32, C22 ಮತ್ತು C12 ಪ್ರೊ ಫೋನ್‌ಗಳನ್ನು ನೋಕಿಯಾದ ಈ ಯೋಜನೆಯಿಂದ ಖರೀದಿಸಬಹುದು.

ಈ ಫೋನ್‌ಗಳಲ್ಲಿ ಯೋಜನೆ

ತ್ವರಿತ ಸಾಲವನ್ನು ತೆಗೆದುಕೊಳ್ಳಲು, ಆಧಾರ್, CIBIL ಸ್ಕೋರ್, ಬ್ಯಾಂಕ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಬೇಕು. EMI ಪಾವತಿಸದಿದ್ದರೆ, ಫೋನ್ ಲಾಕ್ ಆಗುತ್ತದೆ.

ಡಾಕ್ಯುಮೆಂಟ್

ಎಷ್ಟು ಬೇಕಾದ್ರು ಡೇಟಾ ಉಪಯೋಗಿಸಿ: ಇದು ಜಿಯೋದ ಬಂಪರ್ ಆಫರ್