ಆಧಾರ್ ಕಾರ್ಡ್‌ಗೆ ಯಾವ ನಂಬರ್ ಲಿಂಕ್ ಆಗಿದೆ ತಿಳಿಯುವುದು ಹೇಗೆ?

30 November 2023

Author: Vinay Bhat

ಆಧಾರ್ ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ನೀಡಿರುವ ವಿಶೇಷವಾದ 12 ಸಂಖ್ಯೆಗಳಾಗಿರುತ್ತದೆ. ನಿಮ್ಮ ಗುರುತನ್ನು ಸಾಬೀತು ಪಡಿಸುವುದಕ್ಕೆ ಇರುವ ದಾಖಲಾತಿ.

ಆಧಾರ್ ಕಾರ್ಡ್

ಆಧಾರ್ ಕಾರ್ಡ್‌ಗೆ ಮೊಬೈಲ್ ನಂ. ಲಿಂಕ್ ಮಾಡಬೇಕಾಗಿರುವುದು ಕಡ್ಡಾಯ. ಆದರೆ, ಅನೇಕರಿಗೆ ಯಾವ ಮೊಬೈಲ್ ಸಂಖ್ಯೆಯನ್ನು ನೋಂದಾಯಿದ್ದೇವೆ ಎಂದು ನೆನಪಿರುವುದಿಲ್ಲ.

ಮೊಬೈಲ್ ನಂಬರ್

UIDAI ಅಧಿಕೃತ ಅಪ್ಲಿಕೇಶನ್ mAadhaar ನಿಂದ ಸುಲಭವಾಗಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನೀವು ಕಂಡುಹಿಡಿಯಬಹುದು.

ಹೇಗೆ ಕಂಡುಹಿಡಿಯುವುದು?

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ನಂತರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

mAadhaar ಅಪ್ಲಿಕೇಶನ್

ಈಗ ಅಪ್ಲಿಕೇಶನ್‌ನ ಮುಖಪುಟವು ತೆರೆಯುತ್ತದೆ, ಇಲ್ಲಿ ಆಧಾರ್ ಮಾನ್ಯತೆಯನ್ನು ಪರಿಶೀಲಿಸಿ ಆಯ್ಕೆಯನ್ನು ಆರಿಸಬೇಕು.

ಆಧಾರ್ ಸಿಂಧುತ್ವ

ಆಧಾರ್ ಆಯ್ಕೆಯಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸಿ.

ಆಧಾರ್ ಸಂಖ್ಯೆ

ಈಗ ನೀವು ಫಲಿತಾಂಶವನ್ನು ಕಾಣುತ್ತೀರಿ, ಮೊಬೈಲ್ ಸಂಖ್ಯೆಯನ್ನು ಆಧಾರ್‌ನಲ್ಲಿ ನೋಂದಾಯಿಸಿದರೆ ಅದರ ಕೊನೆಯ 3 ಸಂಖ್ಯೆಗಳು ಗೋಚರಿಸುತ್ತವೆ.

ಮೊಬೈಲ್ ನಂಬರ್

ಈ ಮೂಲಕ ಕೊನೆಯ 3 ಅಂಕಿಗಳನ್ನು ನೋಡುವ ಮೂಲಕ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಗುರುತಿಸಬಹುದು.

ಈ ರೀತಿ ಗುರುತಿಸಿ