ಚಂದ್ರಯಾನ-3 ಯಶಸ್ವಿ ಉಡಾವಣೆ: ಇಸ್ರೋದಲ್ಲಿ ಸಂಭ್ರಮ

ಮೂರನೇ ಬಾರಿಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್​​​​ ಧವನ್​​​ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆ.

ಉಡಾವಣೆಯ ಶ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ ಇಸ್ರೋ ಅಧ್ಯಕ್ಷ ಎಸ್​​​​ ಸೋಮನಾಥ್.

ಈ ನೌಕೆ ಆಗಸ್ಟ್​ ಮೂರನೇ ವಾರ ಚಂದ್ರನ ಅಂಗಳಕ್ಕೆ ತಲುಪಲಿದೆ ಎಂಬ ನಿರೀಕ್ಷೆಯಿದೆ.

ಚಂದ್ರಯಾನ-3 ಮಿಷನ್‌ಗೆ 600 ಕೋಟಿ ರೂ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

2003ರಲ್ಲಿ ಚಂದ್ರಯಾನದ ಕನಸು ಕಂಡಿದ್ದ ಆಗಿನ ಪ್ರಧಾನಿ ಅಟಲ್​​ ಬಿಹಾರ ವಾಜುಪೇಯಿ.

ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ ಸಾಕ್ಷಿ-ಪ್ರಧಾನಿ ನರೇಂದ್ರ ಮೋದಿ ಟ್ವೀಟ್