ಸೆಂಗೋಲ್‌ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ನೂತನ ಸಂಸತ್ ಭವನ ಇಂದು(ಮೇ28) ಲೋಕಾರ್ಪಣೆಗೊಂಡಿದೆ.

ನೂತನ ಸಂಸತ್‌ ಭವನ ಲೋಕಾರ್ಪಣೆ ವೇಳೆ ಐತಿಹಾಸಿಕ ರಾಜದಂಡ ಪ್ರತಿಷ್ಠಾಪನೆ ಮಾಡಿದ ಪ್ರಧಾನಿ.

ಸೆಂಗೋಲ್​ ಪ್ರತಿಷ್ಠಾಪನೆ ವೇಳೆ ಸೆಂಗೋಲ್​​​ಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ

ತಮಿಳುನಾಡಿನ ವಿವಿಧ ಅಧೀನಂ ಮಠದ ಪೀಠಾಧಿಪತಿಗಳು ಸೆಂಗೋಲ್ ಅನ್ನು ಮೋದಿಗೆ ನಿನ್ನೆಯೇ ಹಸ್ತಾಂತರಿಸಿದ್ದರು.

ಲೋಕಸಭಾ ಸ್ಪೀಕರ್ ಆಸನದ ಪಕ್ಕದಲ್ಲಿ ಸೆಂಗೋಲ್ ಚಿನ್ನದ ರಾಜದಂಡವನ್ನು ಪ್ರತಿಷ್ಠಾಪಿಸಿದ ಪ್ರಧಾನಿ.

ಚೋಳ ಸಾಮ್ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಸಮಯದಲ್ಲಿ ಬಳಸಲಾಗುತ್ತಿದ್ದ ರಾಜದಂಡ.