ಕೊನೆಯ ಏಕದಿನ ವಿಶ್ವಕಪ್ ಆಡಲಿರುವ 7 ಪ್ರಮುಖ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

ಇದುವರೆಗೆ 2 ಏಕದಿನ ವಿಶ್ವಕಪ್ ಆಡಿರುವ ರೋಹಿತ್, 2015 ಮತ್ತು 2019 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ರೋಹಿತ್ ಶರ್ಮಾ (ಭಾರತ)

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2015 ಮತ್ತು 2019 ರಲ್ಲಿ ಏಕದಿನ ವಿಶ್ವಕಪ್ ಆಡಿದ್ದಾರೆ.

ಮಿಚೆಲ್ ಸ್ಟಾರ್ಕ್​ (ಆಸ್ಟ್ರೇಲಿಯಾ)

ಡೇವಿಡ್ ಮಿಲ್ಲರ್ 2015 ಮತ್ತು 2019 ರಲ್ಲಿ ದಕ್ಷಿಣ ಆಫ್ರಿಕಾ ಪರ ಏಕದಿನ ವಿಶ್ವಕಪ್ ಆಡಿದ್ದಾರೆ.

ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ)

ಲಂಕಾ ಪರ ಏಂಜೆಲೊ ಮ್ಯಾಥ್ಯೂಸ್ 2011, 2015 ಮತ್ತು 2019 ರಲ್ಲಿ ಏಕದಿನ ವಿಶ್ವಕಪ್ ಆಡಿದ್ದಾರೆ.

ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ)

ಈ ಸ್ಟಾರ್ ಆಲ್​ರೌಂಡರ್ 2015 ಮತ್ತು 2019 ರಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.

ಮೊಯಿನ್ ಅಲಿ (ಇಂಗ್ಲೆಂಡ್)

ಕಿವೀಸ್ ತಂಡದ ಈ ಅನುಭವಿ ಬೌಲರ್ 2011, 2015 ಮತ್ತು 2019 ರಲ್ಲಿ ಏಕದಿನ ವಿಶ್ವಕಪ್ ಆಡಿದ್ದಾರೆ.

ಟಿಮ್ ಸೌಥಿ (ನ್ಯೂಜಿಲೆಂಡ್)

ಬಾಂಗ್ಲಾದೇಶದ ಈ ಅನುಭವಿ ಆಲ್​ರೌಂಡರ್ 2007, 2011, 2015 ಮತ್ತು 2019 ರಲ್ಲಿ ಏಕದಿನ ವಿಶ್ವಕಪ್ ಆಡಿದ್ದಾರೆ.

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)